1954 ರಲ್ಲಿ ಮುಂಬೈನಲ್ಲಿ ಜನಿಸಿದ ಬಾಲಿವುಡ್‌ನ ಎವರ್‌ಗ್ರೀನ್ ನಟ ಅನಿಲ್ ಕಪೂರ್‌ಗೀಗ 68 ವರ್ಷ, ಅನಿಲ್ ಅವರನ್ನು ನೋಡಿದರೆ ಯಾರೂ ಕೂಡ ಅವರಿಗೆ 68 ವರ್ಷ ಎಂದು ಹೇಳಲು ಸಾಧ್ಯವಿಲ್ಲ,
ಅನಿಲ್ ಕಪೂರ್
68ನೇ ವಯಸ್ಸಿನಲ್ಲೂ ಅನಿಲ್ ಕಪೂರ್ ಚುರುಕಾಗಿ ಕಾಣುತ್ತಾರೆ. ಇದಕ್ಕೆ ಮುಖ್ಯ ಕಾರಣ ಫಿಟ್ನೆಸ್ ಬಗ್ಗೆ ಅವರು ಕೈಗೊಂಡ ಗಮನ. ಹಾಗಿದ್ರೆ ಅವರ ಫಿಟ್ನೆಸ್ ಸಿಕ್ರೇಟ್ ಏನು ಅಂತ ಈಗ ತಿಳಿಯೋಣ.
ಅನಿಲ್ ಕಪೂರ್ ಫಿಟ್ನೆಸ್ ಮಂತ್ರ
ಅನಿಲ್ ಕಪೂರ್ ದಿನ ವರ್ಕೌಟ್ ಜೊತೆಗೆ ಹಾಟ್ ಯೋಗವನ್ನೂ ಮಾಡುತ್ತಾರೆ. ಅವರ ಯುವ ರೂಪದ ರಹಸ್ಯ ಹಾಟ್ ಯೋಗ. ಅವರು ಕಾರ್ಡಿಯೋ ವ್ಯಾಯಾಮದ ಜೊತೆಗೆ ಕ್ರಂಚ್-ಪುಶಪ್ಸ್‌ಗಳನ್ನು ಮಾಡುತ್ತಾರೆ.
ಅನಿಲ್ ಕಪೂರ್ ವರ್ಕೌಟ್ ದಿನಚರಿ
ಅನಿಲ್ ಕಪೂರ್ ಒಂದು ಸಂದರ್ಶನದಲ್ಲಿ ಎಷ್ಟೇ ಕಾರ್ಯನಿರತರಾಗಿದ್ದರೂ ತಮ್ಮ ವರ್ಕೌಟ್ ದಿನಚರಿ ಮಿಸ್ ಮಾಡಲ್ಲ ಎಂದು ಹೇಳಿದ್ದರು. ಅವರು ಬೆಳಿಗ್ಗೆ6 ಗಂಟೆಗೆ ಎದ್ದು ಓಟ, ಜಾಗಿಂಗ್ ಮತ್ತು ಸೈಕ್ಲಿಂಗ್ ಮಾಡುತ್ತಾರೆ.
ಜಿಮ್‌ನಲ್ಲಿ ವರ್ಕೌಟ್
ಮನೆಯಲ್ಲೇ ಜಿಮ್ ಹೊಂದಿರುವ ಅನಿಲ್ ಕಪೂರ್ ಪ್ರತಿದಿನ 2 ಗಂಟೆಗಳ ಕಾಲ ಜಿಮ್‌ನಲ್ಲಿ ಬೆವರು ಸುರಿಸಿ ವರ್ಕೌಟ್ ಮಾಡುತ್ತಾರೆ ಎನ್ನಲಾಗಿದೆ.
ಅನಿಲ್ ಕಪೂರ್
ಒಂದು ಸಂದರ್ಶನದಲ್ಲಿ ಅನಿಲ್ ಕಪೂರ್ ತಮ್ಮ ಸ್ಮಾರ್ಟ್ ಲುಕ್‌ನ ರಹಸ್ಯ ಒತ್ತಡರಹಿತ ಜೀವನ ಎಂದು ಹೇಳಿದ್ದರು. ಅವರು ಚಿಂತೆಯಿಂದ ದೂರವಿರುತ್ತಾರೆ ಮತ್ತು ಯಾವಾಗಲೂ ಸಂತೋಷವಾಗಿರುತ್ತಾರಂತೆ
ಆಹಾರ ಪದ್ಧತಿ
ಅನಿಲ್ ಕಪೂರ್ ತಮ್ಮ ಆಹಾರಕ್ರಮದ ಬಗ್ಗೆಯೂ ಗಮನ ಹರಿಸುತ್ತಾರೆ. ಅವರು ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್‌ಯುಕ್ತ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಪ್ರತಿ 2 ಗಂಟೆಗಳಿಗೊಮ್ಮೆ ಏನನ್ನಾದರೂ ತಿನ್ನುತ್ತಾರೆ.
ಅನಿಲ್ ಕಪೂರ್
ಅನಿಲ್ ಕಪೂರ್ ಬೆಳಗಿನ ಉಪಾಹಾರದಲ್ಲಿ ಮೊಟ್ಟೆ-ಹಣ್ಣುಗಳು ಮತ್ತು ಜ್ಯೂಸ್ ಕುಡಿಯುತ್ತಾರೆ. ಊಟಕ್ಕೆ ಅವರು ದಾಲ್, ಕುಚಲಕ್ಕಿ ಮತ್ತು ಸಲಾಡ್ ತಿನ್ನಲು ಇಷ್ಟಪಡುತ್ತಾರೆ. ರಾತ್ರಿ ಊಟ ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ