BUSINESS

ಟಾಟಾ ಮೋಟಾರ್ಸ್‌ ಖರೀದಿಗೆ ಸೂಕ್ತ ಸಮಯವೇ?

ನೆಗೆಟಿವ್‌ ಪ್ರಾಫಿಟ್‌

2024ರಲ್ಲಿ ಟಾಟಾ ಮೋಟರ್ಸ್ ಷೇರು ಹೂಡಿಕೆದಾರರಿಗೆ ದೊಡ್ಡ ಹೊಡೆತ ನೀಡಿದೆ. ಈ ವರ್ಷ ಈ ಷೇರು ಹೂಡಿಕೆದಾರರಿಗೆ 8% ನೆಗೆಟಿವ್‌ ಪ್ರಾಫಿಟ್‌ ನೀಡಿದೆ.

52 ವಾರಗಳ ಕನಿಷ್ಠಕ್ಕೆ

ಸೋಮವಾರ ಡಿಸೆಂಬರ್ 23 ರಂದು ಷೇರು ತನ್ನ 52 ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿತು. ದಿನದ ವಹಿವಾಟಿನಲ್ಲಿ ಷೇರು 8.74% ಕುಸಿತದ ನಂತರ 721.50 ಮಟ್ಟದಲ್ಲಿ ಮುಕ್ತಾಯವಾಯಿತು.

ಒಂದು ವರ್ಷದ ಕನಿಷ್ಠ ಮಟ್ಟ

ಒಂದು ವರ್ಷದ ಹಿಂದೆ ಅಂದರೆ 2023ರ ಡಿಸೆಂಬರ್ 23 ರಂದು ಟಾಟಾ ಮೋಟರ್ಸ್ ಷೇರು 696 ರೂ.ಗಳ ಸಮೀಪದಲ್ಲಿತ್ತು. ಈಗ ಮತ್ತೊಮ್ಮೆ ಅದು ತನ್ನ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಮತ್ತೆ ಇಳಿಕೆ ಸಾಧ್ಯತೆ ಕಡಿಮೆ

ಟಾಟಾ ಮೋಟರ್ಸ್ ಷೇರಿನಲ್ಲಿ ಬೇಕಾದಷ್ಟು ಇಳಿಕೆ ಆಗಿದೆ ಎಂದು ತಜ್ಞರು ಹೇಳುತ್ತಾರೆ. ಇದರ ಆರ್‌ಎಸ್‌ಐ 25.8 ಆಗಿದ್ದು, ಇದು ಓವರ್‌ಸೋಲ್ಡ್‌ಗೆ ಸೂಚಿಸುತ್ತದೆ.

40%ರಷ್ಟು ಕುಸಿದ ಷೇರು

ಟಾಟಾ ಮೋಟರ್ಸ್ ಷೇರು ಪ್ರಸ್ತುತ ತನ್ನ 52 ವಾರಗಳ ಗರಿಷ್ಠ ಮಟ್ಟಕ್ಕಿಂತ 40% ಕೆಳಗೆ ವಹಿವಾಟು ನಡೆಸುತ್ತಿದೆ. ಆದ್ದರಿಂದ ಈ ಷೇರಿನಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದು ಲಾಭದಾಯಕವಾಗಿರುತ್ತದೆ.

ಬ್ರೋಕರೇಜ್ ಸಂಸ್ಥೆ ಟಾಟಾ ಮೋಟರ್ಸ್‌ಗೆ ಹೊಸ ಗುರಿ ನೀಡಿದೆ

ಎಲ್‌ಕೆಪಿ ಸೆಕ್ಯುರಿಟೀಸ್ ಟಾಟಾ ಮೋಟರ್ಸ್ ಷೇರನ್ನು ಖರೀದಿಸಲು ಸಲಹೆ ನೀಡಿದೆ. ಬ್ರೋಕರೇಜ್ ಸಂಸ್ಥೆಯು ಷೇರಿಗೆ 970 ರ ಹೊಸ ಟಾರ್ಗೆಟ್‌ ನೀಡಿದೆ.

ಅಲ್ಪಾವಧಿಯಲ್ಲಿ 800 ರೂಪಾಯಿ ಟಾರ್ಗೆಟ್‌

ಅಲ್ಪಾವಧಿಯಲ್ಲಿ ಈ ಷೇರು 785 ರಿಂದ 810 ರ ಮಟ್ಟವನ್ನು ತಲುಪಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಟ್ಟವನ್ನು ದಾಟಿದರೆ, ಅದು 900 ರ ಮಟ್ಟವನ್ನು ಮುಟ್ಟಬಹುದು.

1179 ರ ಮಟ್ಟಕ್ಕೆ ತಲುಪಿದ್ದ ಷೇರು

ಟಾಟಾ ಮೋಟರ್ಸ್ ಷೇರಿನ 52 ವಾರಗಳ ಗರಿಷ್ಠ 1179 ರೂಪಾಯಿ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಬಂಡವಾಳ 2,65,850 ಕೋಟಿ ರೂಪಾಯಿ.

ಗಮನಿಸಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮೊದಲು ಉತ್ತಮ ತಜ್ಞರ ಸಲಹೆ ಪಡೆಯಿರಿ.

ಮನೆಯಲ್ಲೇ ಕೂತು ಕೇವಲ ₹ 50ಕ್ಕೆ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

ಮುಂಬೈನಲ್ಲಿರುವ ತಮನ್ನಾ ಭಾಟಿಯಾ ಐಷಾರಾಮಿ ಮನೆಯ ಇಂಟಿರಿಯರ್ ಹೇಗಿದೆ ನೋಡಿ

ಕಸ ಎಂದು ದೂರ ಎಸೆಯುವ ತೆಂಗಿನ ಚಿಪ್ಪಿನಿಂದ ಗಳಿಸಬಹುದು ಲಕ್ಷ ಲಕ್ಷ ಆದಾಯ

ಇಳಿಕೆಯಾಗಿದ್ಯಾ? ಏರಿಕೆಯಾಗಿದ್ಯಾ? ಹೇಗಿದೆ ಇಂದಿನ ಚಿನ್ನದ ಬೆಲೆ!