BUSINESS
ಆನ್‌ಲೈನ್ ಶಾಪಿಂಗ್ ವಂಚನೆಯಿಂದ ತಪ್ಪಿಸಿಕೊಳ್ಳಲು 7 ಸಲಹೆಗಳು ಇಲ್ಲಿವೆ ನೋಡಿ..
ವಂಚಕರು ಅತೀ ಕಡಿಮೆ ಬೆಲೆಯೊಂದಿಗೆ ಬೋಗಸ್ ಇಂಟರ್ನೆಟ್ ಸೈಟ್‌ಗಳನ್ನು ನಿರ್ಮಿಸುತ್ತಾರೆ. ಆಗ ನೀವು ಸೈಟ್‌ನ ವಿಮರ್ಶೆ, ಡೊಮೇನ್, ಸುರಕ್ಷಿತ ಪಾವತಿ ವಿಧಾನ ಮತ್ತು ವೆಬ್‌ಸೈಟ್‌ನ ವಿಶ್ವಾಸಾರ್ಹತೆ ಪರಿಶೀಲಿಸಬೇಕು.
ವಿಶ್ವಾಸಾರ್ಹ ಚಿಲ್ಲರೆ ವ್ಯಾಪಾರಿಗಳ ಬ್ರ್ಯಾಂಡ್ ಹೆಸರಲ್ಲಿ ಬರುವ ನಕಲಿ ಇಮೇಲ್‌ಗಳು, ವೈಯಕ್ತಿಕ ಮಾಹಿತಿ ಮತ್ತು ಕ್ಲಿಕ್ ಅನ್ನು ಕೇಳುತ್ತವೆ. ಇದನ್ನು ಒತ್ತದೇ ಅಧಿಕೃತ ವ್ಯಾಪಾರಿಗಳ ವೆಬ್‌ಸೈಟ್‌ಗೆ ಭೇಟಿ ನೀಡಿ.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದಕ್ಕೆ ಕ್ಯಾಶ್ ಆನ್ ಡೆಲಿವರಿ ಅವಕಾಶ ಕೊಡದೇ ಹಣ ಪಾವತಿಸಿಕೊಳ್ಳುತ್ತಾರೆ. ನಂತರ, ನಿಮಗೆ ಬುಕ್ ಮಾಡಿದ ವಸ್ತು ನೀಡದೇ ಕಣ್ಮರೆ ಆಗುತ್ತಾರೆ. ವಂಚಕರ ಸೈಟ್ ಬಗ್ಗೆ ಎಚ್ಚರದಿಂದಿರಿ.
ಐಷಾರಾಮಿ ಬ್ರ್ಯಾಂಡ್‌ಗಳನ್ನು ನಕಲು ಮಾಡಲಾಗುತ್ತದೆ. ಆನ್‌ಲೈನ್ ವಂಚಕರು ಕಡಿಮೆ ಬೆಲೆಗೆ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಖರೀದಿಸುವ ಮೊದಲು, ಮಾರಾಟಗಾರರ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸಿ.
ನಿಮ್ಮ ಪಾವತಿ ಮಾಹಿತಿ ನಮೂದಿಸುವ ಮೊದಲು ಪಾವತಿ ಗೇಟ್‌ವೇ ಸುರಕ್ಷಿತೆ ಬಗ್ಗೆ ಖಚಿತಪಡಿಸಿಕೊಳ್ಳಿ. ಅದರ ಭದ್ರತೆ ಪರಿಶೀಲಿಸಲು ವೆಬ್‌ಸೈಟ್‌ನ URL ನಲ್ಲಿ ಪ್ಯಾಡ್‌ಲಾಕ್ ಚಿಹ್ನೆ ಮತ್ತು "https" ಅನ್ನು ನೋಡಿ.
ಮಾರುಕಟ್ಟೆಯ ಪ್ರಸಿದ್ಧ ಕಂಪನಿಯ ಹೆಸರಿನಲ್ಲಿ ನಕಲಿ ಲಿಂಕ್‌ಗಳನ್ನು ಸೃಜಿಸಿ ಇಮೇಲ್‌ಗೆ ಕಳಿಸುತ್ತಾರೆ. ಇಂತಹ ಇಮೇಲ್ ಲಿಂಕ್ ಕ್ಲಿಕ್ ಮಾಡುವ ಬದಲು, ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಖರೀದಿ ಮುಂದುವರೆಸಿ..
ನಕಲಿ ವೆಬ್‌ಸೈಟ್‌ಗಳು ಅಥವಾ ಸೋಷಿಯಲ್ ಮೀಡಿಯಾ ಜಾಹೀರಾತುಗಳನ್ನು ನಂಬಬೇಡಿ. ಪರಿಚಿತ ಇಲ್ಲದ ಕಂಪನಿಗಳ ವಸ್ತು ಖರೀದಿಗೂ ಮೊದಲು ಕಂಪನಿ ಮತ್ತು ವಿಮರ್ಶೆಗಳನ್ನು ಪರಿಶೀಲಿಸಲು ಮರೆಯದಿರಿ.