Astrology

ದೃಷ್ಟಿ ದೋಷ ನಿವಾರಣೆಗೆ ಸರಳ ಮನೆಮದ್ದುಗಳು

ದೃಷ್ಟಿ ಬೀಳುವುದರಿಂದ ಅಥವಾ ಕೆಟ್ಟ ದೃಷ್ಟಿಯಿಂದ ಮನೆಯಲ್ಲಿ ಕಲಹ, ಉದ್ಯೋಗದಲ್ಲಿ ಪ್ರಗತಿಯಿಲ್ಲದಿರುವುದು ಮತ್ತು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಸುವಿನ ಸೆಗಣಿ ಮತ್ತು ಹಳದಿ ಸಾಸಿವೆ

ಹಸುವಿನ ಸೆಗಣಿ, ಹಳದಿ ಸಾಸಿವೆ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಏಳು ಬಾರಿ ತಲೆ ಸುತ್ತ ತಿರುಗಿಸಿ ನಂತರ ಅದನ್ನು ಬೆಂಕಿಗೆ ಹಾಕಿ. ಇದು ದೃಷ್ಟಿ ದೋಷ ನಿವಾರಣೆಗೆ ಸಹಾಯ ಮಾಡುತ್ತದೆ.

ನೀಲಿ ಬಟ್ಟೆ ಮತ್ತು ಪಟಿಕ

ಒಂದು ನೀಲಿ ಬಟ್ಟೆಯಲ್ಲಿ ಸ್ವಲ್ಪ ಪಟಿಕವನ್ನು ಕಟ್ಟಿ ದೃಷ್ಟಿ ದೋಷ ಇರುವ ವ್ಯಕ್ತಿಯ ಮೇಲೆ ಏಳು ಬಾರಿ ತಿರುಗಿಸಿ ನಂತರ ಪಟಿಕವನ್ನು ಬೆಂಕಿಯಲ್ಲಿ ಸುಟ್ಟುಹಾಕಿ. ಇದರಿಂದ ದೃಷ್ಟಿ ದೋಷ ನಿವಾರಣೆಯಾಗಿ ಪ್ರಗತಿಯಾಗುತ್ತದೆ.

ಕಪ್ಪು ಎಳ್ಳು

ಒಂದು ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳು, ಸ್ವಲ್ಪ ಸಾಸಿವೆ ಮತ್ತು ಒಂದು ಒಣಗಿದ ಕೆಂಪು ಮೆಣಸಿನಕಾಯಿಯನ್ನು ಕಟ್ಟಿ ದೃಷ್ಟಿ ದೋಷ ಇರುವ ವ್ಯಕ್ತಿಯ ಮೇಲೆ ಮೂರು ಬಾರಿ ತಿರುಗಿಸಿ. ಇದನ್ನು ಹೊರಗೆ ದೂರ ಎಸೆದು ಬಿಡಿ

ಮನೆಯಿಂದ ದೃಷ್ಟಿ ದೋಷ ನಿವಾರಣೆ

ಮನೆಯಿಂದ ದೃಷ್ಟಿ ದೋಷವನ್ನು ನಿವಾರಿಸಲು ಒಂದು ಪಾತ್ರೆಯಲ್ಲಿ ಉಪ್ಪು, ಎರಡು ಲವಂಗ, ಒಂದು ಏಲಕ್ಕಿ, ದಾಲ್ಚಿನ್ನಿ ತುಂಡು, ತೇಜಪತ್ರೆ ಮತ್ತು ಕರ್ಪೂರವನ್ನು ಇಟ್ಟು ಸುಟ್ಟುಹಾಕಿ. ನಂತರ ಅದನ್ನು ಹೊರಗೆ ಎಸೆಯಿರಿ.

ನಿಂಬೆ-ಮೆಣಸಿನಕಾಯಿ

ಮನೆ, ವ್ಯಾಪಾರ ಸ್ಥಳದ ಹೊರಗೆ ನಿಂಬೆ ಮತ್ತು ಹಸಿರು ಮೆಣಸಿನಕಾಯಿ ನೇತುಹಾಕುವುದರಿಂದ ಕೆಟ್ಟ ದೃಷ್ಟಿ ಒಳಗೆ ಪ್ರವೇಶಿಸುವುದಿಲ್ಲ. ನಕಾರಾತ್ಮಕ ಶಕ್ತಿ ದೂರ ಉಳಿಯುವುದರಿಂದ ಮನೆ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ.

ಉಪ್ಪು ಮತ್ತು ಸಾಸಿವೆ

ಯಾರಿಗಾದರೂ ದೃಷ್ಟಿ ತಗುಲಿದ್ದರೆ, ಬಾಧಿತ ವ್ಯಕ್ತಿಯ ತಲೆಯ ಸುತ್ತ ಉಪ್ಪು ಮತ್ತು ಸಾಸಿವೆಯನ್ನು ಬೆರೆಸಿ 7 ಬಾರಿ ತಿರುಗಿಸಿ. ನಂತರ ಅದನ್ನು ಮನೆಯಿಂದ ಹೊರಗೆ ಎಸೆಯಿರಿ. ಇದರಿಂದಲೂ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಮಗುವಿನ ದೃಷ್ಟಿ ದೋಷ ನಿವಾರಣೆ

ಚಿಕ್ಕ ಮಗುವಿಗೆ ದೃಷ್ಟಿ ತಗುಲಿದ್ದರೆ, 3 ಒಣಗಿದ ಕೆಂಪು ಮೆಣಸಿನಕಾಯಿ ತೆಗೆದುಕೊಂಡು ಸ್ವಲ್ಪ ಉಪ್ಪನ್ನು ಬೆರೆಸಿ, ಮಗುವಿನ ತಲೆಯ ಸುತ್ತ 3 ಬಾರಿ ತಿರುಗಿಸಿ. ನಂತರ ಅದನ್ನು ಯಾವುದಾದರೂ ಪಾತ್ರೆಯಲ್ಲಿ ಇಟ್ಟು ಸುಟ್ಟುಹಾಕಿ.

ಸುಖಮಯ ದಾಂಪತ್ಯದ 5 ರಹಸ್ಯ ಇಲ್ಲಿದೆ

ಚಾಣಕ್ಯ ನೀತಿ: ಈ 5 ಸ್ಥಳಗಳಲ್ಲಿ ಅಪ್ಪಿ ತಪ್ಪಿಯೂ ಮೌನವಾಗಿರಬಾರದು!

ನಾಳೆ ರವಿವಾರ ನವೆಂಬರ್ 10ರ ಅನ್ ಲಕ್ಕಿ ರಾಶಿಗಳು

ಗಂಡ ಹೆಂಡತಿಯ ಈ 5 ತಪ್ಪುಗಳನ್ನು ಕ್ಷಮಿಸ ಬೇಕು, ಯಾಕೆ ಗೊತ್ತಾ?