Asianet Suvarna News Asianet Suvarna News

ಬ್ಲೇಡ್‌ ಬಾಂಬ್‌ಗೆ ಬಲಿಯಾದ ಅಲ್‌ಖೈದಾ ಲೀಡರ್‌, ಅಮೆರಿಕದ ರಹಸ್ಯ ಕ್ಷಿಪಣಿಯ ಒಳನೋಟ!

ಅಲ್‌ಖೈದಾ ಮುಖ್ಯಸ್ಥ ಐಮುನ್‌ ಅಲ್‌ ಜವಾಹಿರಿಯನ್ನು ಹತ್ಯೆ ಮಾಡಲು ಅಮೆರಿಕ ಬಳಸಿರುವ ಮಾಂತ್ರಿಕ ಕ್ಷಿಪಣಿ ಬಗ್ಗೆ ವಿಶ್ವದಲ್ಲಿಯೇ ಚರ್ಚೆ ಆರಂಭವಾಗಿದೆ. ಸದ್ದುಗದ್ದಲವಿಲ್ಲದೆ, ಟಾರ್ಗೆಟ್‌ಅನ್ನು ಮುಗಿಸಿಬಿಡುವ ಆರ್‌9ಎಕ್ಸ್‌ ಹೆಲ್‌ಫೈರ್‌ ನಿಂಜಾ ಮಿಸೈಲ್‌ನಲ್ಲಿರೋದು ಅದೆಂಥಾ ಶಕ್ತಿ!

ಬೆಂಗಳೂರು (ಆ.4): ಭಯೋತ್ಪಾದನೆಯ ವಿರುದ್ಧ ತನ್ನ ಹೋರಾಟದಲ್ಲಿ ಅಮೆರಿಕ ಮತ್ತೊಂದು ದೊಡ್ಡ ಯಶಸ್ಸು ಕಂಡಿದೆ. ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ಪ್ರಮುಖ ಸೂತ್ರಧಾರಿಯಾಗಿದ್ದ ಬಿನ್‌ ಲಾಡೆನ್‌ ಹತ್ಯೆ ಮಾಡಿದ ಬಳಿಕ, ಇಡೀ ದಾಳಿಯ ಸೂತ್ರಧಾರಿ ಹಾಗೂ ಮಾಸ್ಟರ್‌ಮೈಂಡ್‌ ಆಗಿದ್ದ, ಅಲ್‌ಖೈದಾ ಮುಖ್ಯಸ್ಥ ಐಮುನ್‌ ಅಲ್‌ ಜವಾಹಿರಿಯನ್ನು ಕೊಂದು ಹಾಕಿದೆ. ಆದರೆ, ಇದಕ್ಕೆ ಡ್ರೋನ್‌ ದಾಳಿಯನ್ನು ಅಮೆರಿಕ ಅಸ್ತ್ರವಾಗಿ ಬಳಸಿಕೊಂಡಿತ್ತು.

ಜವಾಹಿರಿಯ ಹತ್ಯೆಗೆ ಅಮೆರಿಕ ಆರ್‌9ಎಕ್ಸ್‌ ಹೆಲ್‌ಫೈರ್‌ ನಿಂಜಾ ಮಿಸೈಲ್‌ ಬಳಕೆ ಮಾಡಿದೆ. 2017ರಲ್ಲಿ ಸಿರಿಯಾದ ಅಲ್‌ ಮಸ್ತುಮಾ ಎನ್ನುವ ಹಳ್ಳಿಯೊಂದರಲ್ಲಿ ಅಲ್‌ಖೈದಾ ಭಯೋತ್ಪಾದಕನನ್ನು ಹೊಡೆದುರುಳಿಸಲು ಅಮೆರಿಕ ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಬಳಸಿತ್ತು. ಅದೆಷ್ಟು ಅಚ್ಚುಕಟ್ಟಾಗಿ ಈ ಕ್ಷಿಪಣಿ ಕಾರ್ಯ ನಿರ್ವಹಿಸಿತ್ತೆಂದರೆ, ಕಾರಿನ ಮೇಲ್ಭಾಗ ಮಾತ್ರವೇ ಕ್ಷಿಪಣಿಯಿಂದ ಛಿದ್ರವಾಗಿತ್ತು. ಮುಂಭಾಗ ಹಾಗೂ ಹಿಂಭಾಗವನ್ನು ನೋಡಿದರೆ, ಕ್ಷಿಪಣಿ ದಾಳಿಯಾದ ಯಾವ ಸೂಚನೆಗಳೂ ಸಿಗುತ್ತಿರಲಿಲ್ಲ. ಅಂಥದ್ದೊಂದು ಮಾಂತ್ರಿಕ ಕ್ಷಿಪಣಿಯನ್ನು ಜವಾಹರಿ ಮೇಲೆ ಅಮೆರಿಕ ಬಳಕೆ ಮಾಡಿದೆ.

ಮಂಡ್ಯದ ಯುವತಿಯನ್ನು ಹೊಗಳಿದ್ದ ಅಲ್‌ಖೈದಾ ಮುಖ್ಯಸ್ಥ ಜವಾಹಿರಿ ಅಮೆರಿಕದಿಂದ ಹತ್ಯೆ

ಹಾಗಿದ್ದರೆ, ಬ್ಲೇಡ್‌ ಬಾಂಬ್‌ ಎಂದೂ ಕರೆಯಲ್ಪಡುವ ನಿಂಜಾ ಮಿಸೈಲ್‌ನ ಶಕ್ತಿಯೇನು? ಜವಾಹರಿಯನ್ನು ಆತನ ಮನೆಯಲ್ಲೇ ಅಮೆರಿಕ ಹತ್ಯೆ ಮಾಡಿದೆ. ಇಡೀ ಮನೆಯಲ್ಲಿ ಆತ ನಿಂತಿದ್ದ ಬಾಲ್ಕನಿಯ ಹೊರತಾಗಿ ಎಲ್ಲೂ ಒಂಚೂರೂ ಹಾನಿಯಾಗರಲಿಲ್ಲ. ಅಮೆರಿಕದ ಈ ರಹಸ್ಯ ಕ್ಷಿಪಣಿಯ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌.