Asianet Suvarna News Asianet Suvarna News

ಟ್ರಂಪ್ ಸೋಲೊಪ್ಪದಿದ್ರೆ ಅಮೆರಿಕಾದಲ್ಲಿ ಅಂತರ್ಯುದ್ಧ ಶುರು?

Nov 7, 2020, 10:53 AM IST

ಬೆಂಗಳೂರು (ನ. 07): ಗುರುವಾರ ತಡರಾತ್ರಿಯವರೆಗೂ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭಾರೀ ಮುನ್ನಡೆ ಸಾಧಿಸಿದ್ದ ಈ ಎರಡೂ ರಾಜ್ಯಗಳಲ್ಲಿ ಇದೀಗ ಬೈಡೆನ್‌ ಮುನ್ನಡೆ ಸಾಧಿಸಿರುವುದು ಅವರ ವಿಜಯದ ಹಾದಿಯಲ್ಲಿ ಅತ್ಯಂತ ದೊಡ್ಡ ತಿರುವು ಎಂದೇ ಪರಿಗಣಿಸಲಾಗಿದೆ.

ಒಂದು ವೇಳೆ ಇದೇ ಮುನ್ನಡೆಯನ್ನು ಬೈಡೆನ್‌ ಅಂತಿಮ ಹಂತೆದವರೆಗೂ ಕಾದುಕೊಂಡರೆ ಅಮೆರಿಕದ 46 ನೇ ಅಧ್ಯಕ್ಷರಾಗಿ ಅವರೇ ಆಯ್ಕೆಯಾಗುವುದು ಖಚಿತ. ಆದರೂ ಅಂಚೆಮತಗಳ ಹಣೆಬರಹವನ್ನು ಯಾರೂ ಸ್ಪಷ್ಟವಾಗಿ ಊಹಿಸಲಾಗದ ಕಾರಣ ಇಂದು ನೂತನ ಅಧ್ಯಕ್ಷರ ಕುರಿತು ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ.

ಅಮೆರಿಕಾ ಚುನಾವಣೆ 2020 : ಬೈಡೆನ್ ಆರ್ಭಟದ ಮುಂದೆ ಟ್ರಂಪ್ ಧೂಳಿಪಟ?

ನಾನು ಚುನಾವಣೆ ಗೆದ್ದಾಗಿದೆ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹಾಕಿದ್ದ ಸುಳ್ಳು ಪೋಸ್ಟ್‌ಗಳನ್ನು ಫೇಸ್ಬುಕ್‌ ಹಾಗೂ ಟ್ವೀಟರ್‌ ಅಳಿಸಿ ಹಾಕಿದೆ. ಈ ಚುನಾವಣಾ ಫಲಿತಾಂಶದ ನಂತರ ನಡೆಯೋದೇನು? ನೋಡೋಣ ಬನ್ನಿ..!

 

Video Top Stories