Russia Ukraine Crisis: ಉಕ್ರೇನ್ ಅಕ್ಕಪಕ್ಕದ ರಾಷ್ಟ್ರಗಳ ಜತೆ ಮಾತುಕತೆ ನಡೆಸಿದ್ದೇವೆ: ಪ್ರಹ್ಲಾದ್ ಜೋಶಿ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಬಹುದೊಡ್ಡ ಸವಾಲಿನ ಕೆಲಸ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಳಗಾವಿ (ಮಾ. 01): ಉಕ್ರೇನ್‌ನ ಈಗಿನ ವಾಸ್ತವ ಚಿತ್ರಣ, ಅಲ್ಲಿಂದ ಬರುವ ವಿಡಿಯೋಗಳು ಎಷ್ಟುಸತ್ಯ, ಎಷ್ಟುಸುಳ್ಳು ಎಂದು ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ನೇತೃತ್ವದಲ್ಲಿ ನಾವು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಬಹುದೊಡ್ಡ ಸವಾಲಿನ ಕೆಲಸ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂಥ ವಿಷಮ ಸ್ಥಿತಿಯಲ್ಲಿ ಭಾನುವಾರ ಎರಡು ವಿಮಾನಗಳು ಭಾರತಕ್ಕೆ ಬಂದಿವೆ. ನಮ್ಮ ಪ್ರಯತ್ನ ಮುಂದುವರಿದಿವೆ. ಉಕ್ರೇನ್‌ನ ಅಕ್ಕಪಕ್ಕದ ದೇಶಗಳ ಜತೆ ಮಾತುಕತೆ ನಡೆಸಿದ್ದೇವೆ. ಅವರ ಸಹಯೋಗ, ಸಹಕಾರ ಪಡೆದು ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದೇವೆ. ನಾನು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ರಾಜ್ಯ ಸಚಿವರ ಸಂಪರ್ಕದಲ್ಲಿದ್ದೇನೆ. ಇದು ಕ್ಲಿಷ್ಟಕರ ಸನ್ನಿವೇಶ ಆಗಿರುವುದರಿಂದ ರಷ್ಯಾ, ಉಕ್ರೇನ್ ಎರಡರ ಜತೆಗೂ ಮಾತನಾಡಬೇಕಾಗುತ್ತದೆ ಎಂದರು.
ಇದನ್ನೂ ಓದಿ: Russia Ukraine war ನಾಗರೀಕರ ರಕ್ಷಣೆಯಲ್ಲಿ ಭಾರತ ಯಶಸ್ವಿ ಕಾರ್ಯಾಚರಣೆ, ಕೈಚೆಲ್ಲಿ ಕೂತ ಅಮೆರಿಕ!
ಕೀವ್, ಖಾರ್ಖೀವ್ ತಲುಪಲಾಗುತ್ತಿಲ್ಲ: ಉಕ್ರೇನ್‌ನ ಕೀವ್, ಖಾರ್ಕಿವ್‌ನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಪರದಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೀವ್ ಮತ್ತು ಖಾರ್ಕಿವ್‌ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಹೆಚ್ಚಿನ ಫೋನ್‌ಗಳ ವ್ಯವಸ್ಥೆ ಮಾಡಿದ್ದೇವೆ. ಕೆಲ ವೇಳೆ ವಿದ್ಯುತ್ ಸೇರಿ ಇತರೆ ಸೌಲಭ್ಯ ಸಿಗಲ್ಲ ಎಂದರು.