Asianet Suvarna News Asianet Suvarna News

3ನೇ ವಿಶ್ವ ಯುದ್ಧಕ್ಕೆ ನಾಂದಿ ಹಾಡುತ್ತಾ ಉಕ್ರೇನ್‌ ರಷ್ಯಾ ನಡುವಿನ ಯುದ್ಧ ಭೀತಿ...

ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿವೆ.  ಗಡಿಯುದ್ದಕ್ಕೂ ಉಭಯ ದೇಶಗಳು ಲಕ್ಷಾಂತರ ಸೈನಿಕರನ್ನು ನಿಯೋಜನೆ ಮಾಡಿವೆ. 

ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿವೆ.  ಗಡಿಯುದ್ದಕ್ಕೂ ಉಭಯ ದೇಶಗಳು ಲಕ್ಷಾಂತರ ಸೈನಿಕರನ್ನು ನಿಯೋಜನೆ ಮಾಡಿವೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ಶುರುವಾಗಬಹುದು ಎಂಬ ಸ್ಥಿತಿ ಅಲ್ಲಿದೆ. ಹಲವು ತಿಂಗಳಿನಿಂದ ಉಕ್ರೇನ್ ಗಡಿಯಲ್ಲಿ ರಷ್ಯಾ ಪಡೆಗಳು ಬೀಡು ಬಿಟ್ಟಿರುವುದಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ರಷ್ಯಾ ಬೆದರಿಕೆ ಹಿನ್ನೆಲೆಯಲ್ಲಿ ಉಕ್ರೇನ್ ಪರವಾಗಿ ಅಮೆರಿಕ ತನ್ನ 8,500 ಪಡೆಗಳನ್ನು ನಿಯೋಜಿಸುತ್ತಿದೆ. 

ಉಕ್ರೇನ್ ಸುತ್ತಲೂ ರಷ್ಯಾ ತನ್ನ ಸೈನಿಕರನ್ನು ನಿಯೋಜಿಸಿದ್ದು, ಅವರ ಚಲನವಲನವು ಅಸಹಜ ಎಂದು ಅಮೆರಿಕ ಮತ್ತು ನ್ಯಾಟೋ ಹೇಳಿವೆ. ಜೋ ಬೈಡನ್ ಮತ್ತು ಯುರೋಪಿಯನ್ ನಾಯಕರ ಎಚ್ಚರಿಕೆಯ ನಡುವೆಯೂ ಪುಟಿನ್ ತಮ್ಮ 1 ಲಕ್ಷ ರಷ್ಯಾ ಪಡೆಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸಿದ್ದಾರೆ. ಶೀಘ್ರದಲ್ಲಿಯೇ ಅದು ಉಕ್ರೇನ್‌ನಲ್ಲಿ ತನ್ನ ಸೇನಾ ಕಾರ್ಯಾಚರಣೆಗಳನ್ನು ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೂರನೇ ವಿಶ್ವ ಯುದ್ಧ ಶುರುವಾಗುತ್ತಾ ಎಂಬ ಭೀತಿ ಎದುರಾಗಿದೆ. 

Russia Ukraine Crisis: ಉಕ್ರೇನ್‌ ಸರ್ಕಾರ ಬೀಳಿಸಲು ರಷ್ಯಾ ಪ್ರಯತ್ನಿಸುತ್ತಿದೆಯೆಂದು ಬ್ರಿಟನ್‌ ಗಂಭೀರ ಆರೋಪ

ರಷ್ಯಾ ಮತ್ತು ಉಕ್ರೇನ್ ನಡುವೆ ಇರುವುದು ಗಡಿ ಪ್ರದೇಶದ ವಿವಾದ. 1949ರಲ್ಲಿ ಸೋವಿಯತ್ ಒಕ್ಕೂಟದ ಆಕ್ರಮಣಶೀಲತ್ವವನ್ನು ಎದುರಿಸಲು NATO ಒಕ್ಕೂಟವನ್ನು ರಚಿಸಲಾಗಿತ್ತು. ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಸದಸ್ಯ ದೇಶಗಳಾಗಿದ್ದ ಲಿಥುವೇನಿಯಾ, ಎಸ್ಟೋನಿಯಾ  ಸೇರಿದಂತೆ 30 ಸದಸ್ಯ ದೇಶಗಳೊಂದಿಗೆ ಈ ಮೈತ್ರಿಕೂಟವಿದೆ. ಒಪ್ಪಂದದ ಪ್ರಕಾರ ನ್ಯಾಟೋ ಸದಸ್ಯ ದೇಶಗಳಲ್ಲಿ ಯಾವುದೇ ಒಂದು ದೇಶದ ಮೇಲೆ ಮೂರನೇ ದೇಶ ದಾಳಿ ನಡೆಸಿದರೆ, ಇಡೀ ಮೈತ್ರಿಕೂಟ ಅದರ ರಕ್ಷಣೆಗೆ ಜತೆಗೂಡಬೇಕು. ಈ ಹಿನ್ನೆಲೆಯಲ್ಲಿ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಈ ಸಮರ  ಮೂರನೇ ವಿಶ್ವ ಯುದ್ಧಕ್ಕೆ ನಾಂದಿ ಹಾಡುತ್ತಾ ಎಂಬ ಭೀತಿ ಶುರುವಾಗಿದೆ.

Video Top Stories