Asianet Suvarna News Asianet Suvarna News

ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ಪತ್ನಿ, ಮಕ್ಕಳ ಕೊಂದು ಆತ್ಮಹತ್ಯೆ ಮಾಡ್ಕೊಂಡ ಪತಿ

ತನ್ನ ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ವಿಷಯವನ್ನು ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಇದರಿಂದ ನೊಂದ ಪತಿ ಆರು ವರ್ಷದ ಮಗ ಹಾಗೂ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

First Published Dec 29, 2020, 11:55 AM IST | Last Updated Dec 29, 2020, 12:05 PM IST

ವಾಷಿಂಗ್‌ಟನ್ (ಡಿ. 29):  ತನ್ನ ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ವಿಷಯವನ್ನು ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಇದರಿಂದ ನೊಂದ ಪತಿ ಆರು ವರ್ಷದ ಮಗ ಹಾಗೂ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋವಿಡ್ ಪ್ಯಾಕೇಜ್‌‌ಗೆ  ಅಂತೂ ಇಂತೂ ಕಡೇ ಕ್ಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ. 600 ಡಾಲರ್‌ನಿಂದ 2 ಸಾವಿರ ಡಾಲರ್‌‌ಕ್ಕೆ ಪ್ಯಾಕೇಜ್ ಹೆಚ್ಚಿಸಬೇಕೆಂಬ ಟ್ರಂಪ್ ಇಚ್ಚೆಗೆ ಜನಪ್ರತಿನಿಧಿಗಳು ಬೆಂಬಲಿಸಿದ್ದಾರೆ. 

ಆರ್‌ಟಿಇ ದೋಖಾ ನಡೆಯುತ್ತಿರುವುದು ಹೇಗೆ? ಹೇಳ್ತಾರೆ ಕೇಳಿ!

ಅಟ್ಲಾಂಟದಲ್ಲಿ ಪ್ರಾಣಿಗಳ ರಕ್ಷಣಾ ಕೇಂದ್ರಕ್ಕೆ ಬೆಂಕಿ ಬಿದ್ದಿತ್ತು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ನಿರ್ಗತಿಕ ವ್ಯಕ್ತಿಯೊಬ್ಬ ತಕ್ಷಣವೇ ಕಾರ್ಯಪ್ರವೃತ್ತನಾಗಿ ಕೇಂದ್ರದಲ್ಲಿದ್ದ 16 ಪ್ರಾಣಿಗಳನ್ನು ಉರಿಯುವ ಜ್ವಾಲೆಯಿಂದ ರಕ್ಷಿಸಿದ್ದಾನೆ. ಬ್ರಿಟನ್‌ನಲ್ಲಿ ಪತ್ತೆಯಾದ ಹೊಸ ತಳಿಯ ವೈರಸ್‌ ಜಪಾನ್‌ನಲ್ಲಿಯೂ ಕಾಣಿಸಿಕೊಂಡಿತ್ತು. ಇದೀಗ ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಗೊಂಡ ವೈರಸ್ ಸಹ ಜಪಾನ್‌ನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇವೆಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

Video Top Stories