Asianet Suvarna News Asianet Suvarna News

ಮಗಳ ಟಾಪ್‌ಲೆಸ್ ಫೋಟೋ ಪೋಸ್ಟ್ ಮಾಡಿದ ತಾಯಿ, ಟ್ರಂಪ್ 3 ಮಕ್ಕಳಿಗೆ ಹೆಚ್ಚಾದರು ಟ್ವಿಟರ್ ಫಾಲೋಯರ್ಸ್!

ಅಮೆರಿಕದ ಫ್ಲೋರಿಡಾ ಕಾಲೇಜೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಾಷಿಂಗ್‌ಟನ್ (ಜ. 27):  ಅಮೆರಿಕದ ಫ್ಲೋರಿಡಾ ಕಾಲೇಜೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸರ ಇಂಥ ವರ್ತನೆಗೆ ವ್ಯಾಪಕ ಖಂಡನೆಯೂ ವ್ಯಕ್ತವಾಗುತ್ತಿದೆ. ಇನ್ನು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಕೌನ್ಸೆಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆಲ್ಲೇನ್ ಕಾನ್ವೇ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಮಗಳ ಟಾಪ್‌ಲೆಸ್ ಫೋಟೋ ಶೇರ್ ಮಾಡಿರುವುದು ದೊಡ್ಡ ಸುದ್ದಿಯಾಗಿದೆ.

ದೆಹಲಿ ದಂಗೆ: 5 ತಿಂಗಳ ಹಿಂದೆಯೇ ಸ್ಕೆಚ್ ನಡೆಸಿತ್ತಾ ಖಲಿಸ್ತಾನ..?

ಸಾಕಷ್ಟು ಹೈಡ್ರಾಮಾ ನಂತರ ಟ್ರಂಪ್ ಅಧಿಕಾರದಿಂದ ಕೆಳಗಿಳಿದರು. ಯಾವಾಗ ಬೈಡನ್ ಅಧಿಕಾರ ಸ್ವೀಕರಿಸಿದರೋ ಟ್ರಂಪ್ ಮಕ್ಕಳ ಟ್ವೀಟರ್ ಫಾಲೋಯರ್ಸ್ ವಿಪರೀತ ಹೆಚ್ಚಾಗುತ್ತಿದ್ದಾರಂತೆ.  ಪುತ್ರಿಯರಾದ ಇವಾಂಕಾ  ಟ್ರಂಪ್, ಟಿಫನಿ ಟ್ರಂಪ್ ಮತ್ತು ಡೊನಾಲ್ಡ್ ಟ್ರಂಪ್ ಜೂನಿಯರ್‌ ಅನ್ನು ಸಾವಿರಾರು ಮಂದಿಫಾಲೋ ಮಾಡಲು ಆರಂಭಿಸಿದ್ದಾರಂತೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

Video Top Stories