Asianet Suvarna News Asianet Suvarna News

#Trending: ಪದತ್ಯಾಗ ಮಾಡಲೊಲ್ಲದ ಟ್ರಂಪ್, ಅಮೆರಿಕದಲ್ಲಿ ಭಾರತೀಯರ ಕಮಾಲ್!

ಕೊರೋನಾ ಹಾವಳಿ ನಡುವೆಯೇ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಟ್ರಂಪ್‌ರನ್ನು ಸೋಲಿಸಿ ಗೆದ್ದಾಗಿದೆ. ಜನವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನೂ ವಹಿಸಿಕೊಳ್ಳಲಿದ್ದಾರೆ. ಹೀಗಿರುವಾಗ ತಮ್ಮ ಕಾಲಾವಧಿಯಲ್ಲಿ ಕಾರ್ಯ ನಿರ್ವಹಿಸಲು ವಿಭಿನ್ನ ಹುದ್ದೆಗಳಿಗೆ ಅಧಿಕಾರಿಗಳನ್ನು ಬೈಡೆನ್ ನೇಮಿಸಲಾರಂಭಿಸಿದ್ದಾರೆ. ಇಲ್ಲಿ ಭಾರತೀಯರು ಕಮಾಲ್ ಮಾಡಿದ್ದು, ಬಹುತೇಕ ಹುದ್ದೆಗಳನ್ನು ಬಾಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಇಂದು ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆದ ಸುದ್ದಿಗಳು ಇಲ್ಲಿವೆ ನೋಡಿ

First Published Dec 23, 2020, 12:05 PM IST | Last Updated Dec 23, 2020, 12:16 PM IST

ವಾಷಿಂಗ್ಟನ್(ಡಿ.23) ಕೊರೋನಾ ಅಟ್ಟಹಾಸದ ಬೆನ್ನಲ್ಲೇ ಸದ್ಯ ಎಂಟ್ರಿ ಕೊಟ್ಟಿರುವ ಕೊರೋನಾ ಹೊಸ ತಳಿ ಜಗತ್ತಿನ ನಿದ್ದೆಗೆಡಿಸುತ್ತಿದೆ. ಹೀಗಿರುವಾಗ ತಾವು ಈ ಹೊಸ ತಳಿಗೆ ಕೇವಲ ಆರು ವಾರದಲ್ಲಿ ಲಸಿಕೆ ಕಂಡು ಹಿಡಿಯಲು ಸಿದ್ಧರಿದ್ದೇವೆಂದು ಫೈಝರ್ ತಿಳಿಸಿದೆ. ಇದು ಜನರಲ್ಲಿ ಕೊಂಚ ಆಶಾವಾದ ಹುಟ್ಟು ಹಾಕಿದ್ದರೂ, ಎಷ್ಟು ಪರಿಣಾಮಕಾರಿಯಾಗಿರಬಹುದೆಂಬ ಸವಾಲೂ ಮೂಡಿಸಿದೆ. ಇನ್ನು ಇತ್ತ ಅಂಟಾರ್ಟಿಕಕ್ಕೂ ಕೊರೋನಾ ಲಗ್ಗೆ ಇಟ್ಟಿದೆ, ಈ ಮೂಲಕ ಇಡೀ ಬೂಮಿಗೆ ಈ ಮಹಾಮಾರಿ ವ್ಯಾಪಿಸಿದಂತಾಗಿದೆ.

ಕೊರೋನಾ ಹಾವಳಿ ನಡುವೆಯೇ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಟ್ರಂಪ್‌ರನ್ನು ಸೋಲಿಸಿ ಗೆದ್ದಾಗಿದೆ. ಜನವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನೂ ವಹಿಸಿಕೊಳ್ಳಲಿದ್ದಾರೆ. ಹೀಗಿರುವಾಗ ತಮ್ಮ ಕಾಲಾವಧಿಯಲ್ಲಿ ಕಾರ್ಯ ನಿರ್ವಹಿಸಲು ವಿಭಿನ್ನ ಹುದ್ದೆಗಳಿಗೆ ಅಧಿಕಾರಿಗಳನ್ನು ಬೈಡೆನ್ ನೇಮಿಸಲಾರಂಭಿಸಿದ್ದಾರೆ. ಇಲ್ಲಿ ಭಾರತೀಯರು ಕಮಾಲ್ ಮಾಡಿದ್ದು, ಬಹುತೇಕ ಹುದ್ದೆಗಳನ್ನು ಬಾಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಇಂದು ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆದ ಸುದ್ದಿಗಳು ಇಲ್ಲಿವೆ ನೋಡಿ

Video Top Stories