Asianet Suvarna News Asianet Suvarna News

ಹೇಳಿದ್ದೆಲ್ಲಾ ಸುಳ್ಳೆ ಸುಳ್ಳು.. ತಾಲೀಬಾನ್‌ನಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕ

Sep 15, 2021, 6:37 PM IST

ತಾಲೀಬಾನಿಗಳ ಟ್ಟಹಾಸ ಒಂದೆರಡಲ್ಲ. ಕಂಡ ಕಂಡಲ್ಲಿ ಎಕೆ 47  ಗುಡುಗು. ರಕ್ಕಸರು ನೀಡುತ್ತಿರುವ ಹಿಂಸೆ ಮನುಕುಲಕ್ಕೆ ಬೇಡ. ಸ್ವಾತಂತ್ರ್ಯ ಕೊಡಲ್ಲ.. ಹೆಂಗಸರು ಮಕ್ಕಳನ್ನು ಹೆರಬೇಕು ಅಷ್ಟೇ.. ಅಫ್ಘಾನಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕೊನೆಯಾಗಿದೆ. ಅದಕ್ಕೆ ತಾಲೀಬಾನ್ ಕಾರಣ ಎಂದು ಹೊಸದಾಗಿ ಹೇಳಬೇಕಿಲ್ಲ.

ಸಾವಿಗೀಡಾಗಿದ್ದ ಉಗ್ರ ಇದೀಗ ಪ್ರತ್ಯಕ್ಷ

ಹೆಂಗಸರು ಮಕ್ಕಳನ್ನು ಹೆರಬೇಕು ಅಷ್ಟೇ.  ತಾಲೀಬಾನಿಗೆ ಒಂದಿಷ್ಟು ಗಟ್ಟಿ ಗಿತ್ತಿಯರು ಸೆಡ್ಡು ಹೊಡೆದಿದ್ದಾರೆ. ಧೂಳು ತುಂಬಿದ ಭೂಮಿಯಲ್ಲಿ ರಾಕ್ಷಸರ ಅಟ್ಟಹಾಸ. ಕಂಡ ಕಂಡಲ್ಲಿ ಬೆಂಕಿ ಹಚ್ಚುವ ಉಗ್ರರು ಮತ್ತೆ ಹಳೆ ನಿಯಮ ಜಾರಿ ಮಾಡಿಕೊಂಡಿದ್ದಾರೆ. ನಾವು ಮೊದಲಿನಂತೆ ಇಲ್ಲ ಎಂದು ಸುಳ್ಳು ಹೇಳಿ ಜಗತ್ತನ್ನು ನಂಬಿಸುವ ಕೆಲಸ ಮಾಡುತ್ತಿದ್ದಾರೆ.