Asianet Suvarna News Asianet Suvarna News

ತಾಲಿಬಾನ್‌ ವಶದಲ್ಲಿ ಶಕುನಿಯ ರಾಷ್ಟ್ರ: ಭಾರತಕ್ಕೆ ಆಪತ್ತು? ಇತಿಹಾಸ ತೆರೆದಿಟ್ಟ ಆ ರಹಸ್ಯ!

ಅಫ್ಘಾನಿಸ್ತಾನದಲ್ಲಿ ಈಗ ಭಯೋತ್ಪಾದಕರ ಅಟ್ಟಹಾಸ. ಭಾರತಕ್ಕೆ ಶುರುವಾಗಿದ್ದೇಕೆ ಹೈಟೆನ್ಶನ್? ತಾಲಿಬಾನ್‌ ವಶದಲ್ಲಿದೆ ಶಕುನಿಯ ರಾಷ್ಟ್ರ. ಲಷ್ಕರ್, ಜೈಷ್‌ ಮುಂದಿನ ಟಾರ್ಗೆಟ್‌ ಭಾರತನಾ? ಅಪ್ಘಾನ್‌ ಬಿಕ್ಕಟ್ಟು ಎದುರಾದಾಗೆಲ್ಲಾ ಭಾರತಕ್ಕೆ ಆಪತ್ತು ಕಾಡೋದು ಏಕೆ? ಇತಿಹಾಸ ತೆರೆದಿಟ್ಟ ಆ ರಹಸ್ಯ ಏನು?

First Published Jul 13, 2021, 5:31 PM IST | Last Updated Jul 13, 2021, 5:32 PM IST

ಕಾಬೂಲ್(ಜು.13): ಅಫ್ಘಾನಿಸ್ತಾನದಲ್ಲಿ ಈಗ ಭಯೋತ್ಪಾದಕರ ಅಟ್ಟಹಾಸ. ಭಾರತಕ್ಕೆ ಶುರುವಾಗಿದ್ದೇಕೆ ಹೈಟೆನ್ಶನ್? ತಾಲಿಬಾನ್‌ ವಶದಲ್ಲಿದೆ ಶಕುನಿಯ ರಾಷ್ಟ್ರ. ಲಷ್ಕರ್, ಜೈಷ್‌ ಮುಂದಿನ ಟಾರ್ಗೆಟ್‌ ಭಾರತನಾ? ಅಪ್ಘಾನ್‌ ಬಿಕ್ಕಟ್ಟು ಎದುರಾದಾಗೆಲ್ಲಾ ಭಾರತಕ್ಕೆ ಆಪತ್ತು ಕಾಡೋದು ಏಕೆ? ಇತಿಹಾಸ ತೆರೆದಿಟ್ಟ ಆ ರಹಸ್ಯ ಏನು?

ಸ್ಮಶಾನಗಳ ಸಾಮ್ರಾಜ್ಯವಾದ ಅಪ್ಘಾನಿಸ್ತಾನ: ಅಮೆರಿಕ ಪಡೆ ನಿರ್ಗಮನ, ತಾಲೀಬಾನಿಯರ ಅಟ್ಟಹಾಸ!

ಅಲ್‌ಖೈದಾ, ಐಸಿಸ್‌, ತಾಲಿಬಾನ್‌ ಉಗ್ರ ಸಂಘಟನೆಗಳ ವಿರುದ್ಧದ ಸಂಘಟಿತ ಜಾಗತಿಕ ಹೋರಾಟಕ್ಕೆ ಯಶ ಸಿಕ್ಕುತ್ತಿದೆ ಎನ್ನುವ ಹಂತದಲ್ಲೇ, ಇದೀಗ ಆಫ್ಘಾನಿಸ್ತಾನದಲ್ಲಿ ನಡೆದಿರುವ ಬೆಳವಣಿಗೆಗಳು ಮತ್ತೆ ವಿಶ್ವ ಸಮುದಾಯವನ್ನು ಆತಂಕಕ್ಕೆ ಗುರಿ ಮಾಡಿದೆ. ಅದರಲ್ಲೂ ಬಗಲಲ್ಲೇ ಪಾಕಿಸ್ತಾನ, ಚೀನಾದಂಥ ಶತ್ರು ದೇಶಗಳನ್ನು ಇಟ್ಟುಕೊಂಡಿರುವ ಭಾರತಕ್ಕಂತೂ ಇದು ಇನ್ನಷ್ಟು ಆತಂಕ ಹುಟ್ಟಿಸುವ ಘಟನೆಯೂ ಹೌದು.

ಕಂದಹಾರ್‌ನಿಂದ ಭಾರತದ ಸಿಬ್ಬಂದಿ ಸಿಬ್ಬಂದಿ ವಾಪಸ್‌!

3 ವರ್ಷಗಳ ಹಿಂದೆ ತಾಲಿಬಾನ್‌ ಜೊತೆಗೆ ಶಾಂತಿ ಮರುಸ್ಥಾಪನೆ ಪ್ರಕ್ರಿಯೆ ಭಾಗವಾಗಿ ಆರಂಭಿಸಿದ ಮಾತುಕತೆ ಮತ್ತು 2020ರಲ್ಲಿ ಮಾಡಿಕೊಂಡ ಒಪ್ಪಂದದ ಅನ್ವಯ ಇದೀಗ ಅಮೆರಿಕ ಆಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಪೂರ್ಣವಾಗಿ ಹಿಂದಕ್ಕೆ ಕರೆಸಿಕೊಂಡಿದೆ. ಆದರೆ ಮಾತಿಗೆ ತಪ್ಪಿರುವ ತಾಲಿಬಾನ್‌, ಕಳೆದ 2 ತಿಂಗಳಿನಿಂದ ದಿನಕ್ಕೊಂದು ಪ್ರದೇಶದಂತೆ ಒಂದೊಂದೇ ಪ್ರದೇಶವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. 

Video Top Stories