Asianet Suvarna News Asianet Suvarna News

ದ. ಆಫ್ರಿಕಾ: ಮನೆ, ಮಾಲ್‌ಗೆ ನುಗ್ಗಿ ಹಗಲು ದರೋಡೆ, ಭಾರೀ ಹಿಂಸಾಚಾರ!

Jul 22, 2021, 4:59 PM IST

ಕೇಪ್‌ಟೌನ್(ಜು.22) ಇಲ್ಲೊಂದು ದೇಶ ಹೊತ್ತಿ ಉರಿಯುತ್ತಿದೆ. ಹೀಗಿರುವಾಗ ಅಲ್ಲಿನ ಜನರು ಹಗಲು ದರೋಡೆಗಿಳಿದಿದ್ದು, ರಾಜಾರೋಷವಾಗಿ ಸಿಕ್ಕಿದ್ದೆಲ್ಲಾ ಹಗಲು ದರೋಡೆ ಮಾಡುತ್ತಿದ್ದಾರೆ. 

ಹೌದು ಇಂತಹ ದೃಶ್ಯ ಕಂಡು ಬಂದಿದ್ದು ದಕ್ಷಿಣ ಆಫ್ರಿಕಾದಲ್ಲಿ. ಇಲ್ಲಿನ ಜನರೆಲ್ಲಾ ಕೈಗೆ ಸಿಕ್ಕಿದೆಲ್ಲಾ ಲೂಟಿ ಹೊಡೆದು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಮನೆ, ಮಾಲ್‌ಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ. ಕಂಡ ಕಂಡಲ್ಲಿ ಗುಂಡಿನ ದಾಳಿ.. ಹೀಗೆ ಈ ರಾಷ್ಟ್ರ ಅಕ್ಷರಶಃ ಕಳ್ಳರ ರಾಷ್ಟ್ರವಾಗಿದೆ. ಅಷ್ಟಕ್ಕೂ ಇಂತಹ ಪರಿಸ್ಥಿತಿ ಬಂದಿದ್ದೇಕೆ? ಇಲ್ಲಿದೆ ವಿವರ