ಇಂದು ರಾತ್ರಿಯೇ ಭಾರತದಿಂದ ಲಂಡನ್‌ಗೆ ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾ!

ರಾಜೀನಾಮೆ ನೀಡಿ ಬಾಂಗ್ಲಾದಿಂದ ಪರಾರಿಯಾದ ಪ್ರಧಾನಿ ಶೇಕ್ ಹಸೀನಾ ಭಾರತದಲ್ಲಿ ಲ್ಯಾಂಡ್ ಆಗಿದ್ದಾರೆ. ಅತ್ತ ಬಾಂಗ್ಲಾದೇಶ ರಣಾಂಗಣವಾಗಿದೆ. ಶೀಘ್ರದಲ್ಲೇ ಮಿಲಿಟರಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ.
 

First Published Aug 5, 2024, 10:50 PM IST | Last Updated Aug 5, 2024, 10:50 PM IST

ಮೀಸಲಾತಿ ಪ್ರತಿಭಟನೆಗೆ ಬಾಂಗ್ಲಾದೇಶ ಹೊತ್ತಿ ಉರಿದಿದೆ. ಸೇನೆ ಸೂಚನೆ ಮೇರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಕ್ ಹಸೀನಾ ಬಾಂಗ್ಲಾದಿಂದ ಪರಾರಿಯಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಇದೀಗ ಭಾರತದಿಂದ ಶೇಕ್ ಹಸೀನಾ ಲಂಡನ್‌ಗೆ ತೆರಳಲಿದ್ದಾರೆ. ಈ ಕುರಿತು ವಿದೇಶಾಂಗ ಸಚಿವ ಜೈಶಂಕರ್, ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದಾರೆ. ಇತ್ತ ಬಾಂಗ್ಲಾದೇಶದಲ್ಲಿ ಪ್ರಧಾನಿ ನಿವಾಸಕ್ಕೆ ನುಗ್ಗಿರುವ ಪ್ರತಿಭಟನಾ ಕಾರರು ಗುಡಿಸಿ ಗುಂಡಾಂತರ ಮಾಡಿದ್ದಾರೆ.