Asianet Suvarna News Asianet Suvarna News

ಭಾರತದ ವಿರುದ್ಧ ಮಸಲತ್ತು ಮಾಡಲು ಹೋಗಿ ಮುಗ್ಗರಿಸಿ ಬಿದ್ದಿವೆ ಪಾಕ್, ಚೀನಾ..!

ಭಾರತದ ವಿರುದ್ದ ಚೀನಾ ಏನೇ ಕುತಂತ್ರಿ ಬುದ್ಧಿ ಮಾಡಿದ್ರೂ ಅದು ವರ್ಕೌಟ್ ಆಗುವುದಿಲ್ಲ. ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುವುದು, ಸೇನೆಯನ್ನು ನಿಯೋಜನೆ ಮಾಡುವುದು ಇವರ ಖಯಾಲಿ. ಇದಕ್ಕೆಲ್ಲಾ ನಮ್ಮ ಸೇನಾ ಹುಲಿಗಳು ಸರಿಯಾಗಿ ಉತ್ತರ ಕೊಟ್ಟು ಬಾಯಿ ಮುಚ್ಚಿಸಿವೆ.

ನವದೆಹಲಿ (ಅ. 27): ಭಾರತದ ವಿರುದ್ದ ಚೀನಾ ಏನೇ ಕುತಂತ್ರಿ ಬುದ್ಧಿ ಮಾಡಿದ್ರೂ ಅದು ವರ್ಕೌಟ್ ಆಗುವುದಿಲ್ಲ. ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುವುದು, ಸೇನೆಯನ್ನು ನಿಯೋಜನೆ ಮಾಡುವುದು ಇವರ ಖಯಾಲಿ. ಇದಕ್ಕೆಲ್ಲಾ ನಮ್ಮ ಸೇನಾ ಹುಲಿಗಳು ಸರಿಯಾಗಿ ಉತ್ತರ ಕೊಟ್ಟು ಬಾಯಿ ಮುಚ್ಚಿಸಿವೆ. ಆದರೂ ತಂಟೆ ಮಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇನ್ನು ಚೀನಾ ನರಿ ಬುದ್ದಿಗೆ ಪಾಕಿಸ್ತಾನ ಕೂಡಾ ಸಾಥ್ ನೀಡುತ್ತಿದೆ. 

ಪಾಕಿಸ್ತಾನದಲ್ಲಿ ಪೊಲೀಸ್ ದಂಗೆ: ಸರ್ಕಾರದ ವಿರುದ್ಧ ಪ್ರಬಲ ಹೋರಾಟ ಶುರು

ಪಾಕ್‌ನಲ್ಲಿ ಗಂಭೀರ ಬಿಕ್ಕಟ್ಟು ಎದುರಾಗಿದೆ.  ರಾಜಕೀಯದಲ್ಲಿ ಸೇನೆ ಮೂಗು ತೂರಿಸುತ್ತಿದೆ, ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಈಗಾಗಲೇ 11 ರಾಜಕೀಯ ಪಕ್ಷಗಳು ಒಗ್ಗೂಡಿ ದೇಶವ್ಯಾಪಿ ಪ್ರತಿಭಟನೆ ಆರಂಭಿಸಿವೆ. ಇದೇ ಸಂದರ್ಭದಲ್ಲಿ ಪೊಲೀಸ್‌ ಮುಖ್ಯಸ್ಥರ ಅಪಹರಣ ಘಟನೆ ನಡೆದಿರುವುದು ಇಮ್ರಾನ್‌ ಸರ್ಕಾರ ಹಾಗೂ ಸೇನೆಗೆ ಭಾರಿ ಮುಳುವಾಗಿದೆ. 

Video Top Stories