Asianet Suvarna News Asianet Suvarna News

ದೋಷಿ ರಾಹುಲ್‌ ಗಾಂಧಿ ಬಗ್ಗೆ ಜನಾಭಿಪ್ರಾಯವೇನು?

ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ನೀಡುವುದರ ಜೊತೆಗೆ, ಹೈಕೋರ್ಟ್ ಬಾಗಿಲು ತಟ್ಟೋಕೆ 30 ದಿನಗಳ ಅವಧಿಯನ್ನೂ ಕೊಟ್ಟಿದೆ.

ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ 2 ವರ್ಷ ಜೈಲು ಶಿಕ್ಷೆ ನೀಡುವುದರ ಜೊತೆಗೆ, ಹೈಕೋರ್ಟ್ ಬಾಗಿಲು ತಟ್ಟೋಕೆ 30 ದಿನಗಳ ಅವಧಿಯನ್ನೂ ಕೊಟ್ಟಿದೆ.  ಇಷ್ಟಾದರು ರಾಹುಲ್ ಗಾಂಧಿ, ಮೋದಿ ಅವರ ವಿರುದ್ಧ ಮಾತಾಡ್ತಾ ಇದ್ದಾರೆ. ಅದಲ್ಲದೆ ನಾನು ಮೋದಿ ಅದಾನಿ ಸಂಬಂಧವನ್ನ ಬಯಲು ಮಾಡಿದ್ದಕ್ಕೆ ನಾನು ಟಾರ್ಗೆಟ್ ಆಗಿದ್ದೇನೆ ಎಂದು  ರಾಹುಲ್ ಗಾಂಧಿ ಹೇಳಿದ್ದಾರೆ. ಇನ್ನು 2019ರಲ್ಲಿ ರಾಹುಲ್ ಗಾಂಧಿ ಆಡಿದ್ದ ಮಾತಿಗೆ, 2023ರಲ್ಲಿ ಶಿಕ್ಷೆಯಾಗಿದ್ದು, ವಾಯ್ನಾಡಿನಿಂದ ದೊರೆತಿದ್ದ ಲೋಕಸಭಾ ಸದಸ್ಯ ಸ್ಥಾನ ಕೈಜಾರಿದೆ.. ಅಂದಹಾಗೆ  ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯ ಬಯೋ ವಿಭಾಗದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ ಹಾಗೂ ಅನರ್ಹ ಸಂಸದ ಅಂತ ಬದಲಿಸಿಕೊಂಡಿದ್ದಾರೆ. ಮುಂದಿನ ಸೆಪ್ಟಂಬರ್  ನಲ್ಲಿ ವಾಯ್ನಾಡಲ್ಲಿ ಉಪಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ನಡೀತಿದೆ  ಎಂದು ಹೇಳಲಾಗುತ್ತಿದೆ.  ದೇಶ್ ಕಾ ಮೂಡ್ ಇದರ ಬಗ್ಗೆ10 ಸಾವಿರ ಜನರ ಅಭಿಪ್ರಾಯ ಸಂಗ್ರಹ ಮಾಡಿದ್ದು,ಅದರಲ್ಲಿ ಬಂದ ಉತ್ತರಗಳು ಏನೇನು ಅನ್ನೋದನ್ನ ಕಂಪ್ಲೀಟಾಗಿ ನೋಡಲು ಈ ವಿಡಿಯೋ ನೋಡಿ.

Video Top Stories