Asianet Suvarna News Asianet Suvarna News

ಕಿಮ್ ಆರೋಗ್ಯ ಸ್ಥಿತಿ ಗಂಭೀರ: ಚಿಕಿತ್ಸೆ ನೀಡಿದ ವೈದ್ಯರ ಎಡವಟ್ಟು?

ಕೊರಿಯಾ ಸರ್ವಾಧಿಕಾರಿ ಅಧ್ಯಕ್ಷ ಕಿಮ್‌ ಜಾಂಗ್‌ಗೆ ಕೊರೋನಾ?| ಚೀನಾ ವೈದ್ಯರಿಂದ ಹರಡಿದ ಸಾಧ್ಯತೆ|  ಕಿಮ್‌ ಜಾಂಗ್‌ ಉನ್‌ಗೆ ಹೃದಯ ನಾಳ ಚಿಕಿತ್ಸೆಗಾಗಿ ಚೀನಾದ ವೈದ್ಯರೊಬ್ಬರು ಉತ್ತರ ಕೊರಿಯಾಕ್ಕೆ ಆಗಮಿಸಿದ್ದರು

ವಾಷಿಂಗ್ಟನ್‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಕಳೆದ ಕೆಲ ದಿನಗಳಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಆತನಿಗೆ ಕೊರೋನಾ ಹಬ್ಬಿರುವುದೇ ಕಾರಣ ಎಂಬ ವರದಿಗಳ ಬೆನ್ನಲ್ಲೇ, ಕಿಮ್‌ ಚೀನಾದ ವೈದ್ಯರೊಬ್ಬರಿಂದ ಕೊರೋನಾಗೆ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಮೆರಿಕದ ವರದಿಗಾರರೊಬ್ಬರು ಹೇಳಿಕೊಂಡಿದ್ದಾರೆ.

ಕಿಮ್ ಮೆದುಳು ನಿಷ್ಕ್ರಿಯ: ಉತ್ತರಾಧಿಕಾರಿ ರೇಸ್‌ನಲ್ಲಿ ಈ 'ಶಕ್ತಿಶಾಲಿ ಮಹಿಳೆ', ಯಾರೀಕೆ?

ಕಿಮ್‌ ಜಾಂಗ್‌ ಉನ್‌ಗೆ ಹೃದಯ ನಾಳ ಚಿಕಿತ್ಸೆಗಾಗಿ ಚೀನಾದ ವೈದ್ಯರೊಬ್ಬರು ಉತ್ತರ ಕೊರಿಯಾಕ್ಕೆ ಆಗಮಿಸಿದ್ದರು. ಅವರಿಂದ ಕಿಮ್‌ ಜಾಂಗ್‌ ಉನ್‌ಗೆ ಕೊರೋನಾ ಸೋಂಕು ತಗುಲಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜಾಕ್‌ ಪೊಸೊಬಿಕ್‌ ಎಂಬ ಪತ್ರಕರ್ತರೊಬ್ಬರು ವಿವಿಧ ಮೂಲಗಳನ್ನು ಆಧರಿಸಿ ಟ್ವೀಟ್‌ ಮಾಡಿದ್ದಾರೆ. ಆದರೆ, ಇವರ ಹೇಳಿಕೆಯನ್ನು ಯಾವುದೇ ಅಧಿಕಾರಿ ಖಚಿತಪಡಿಸಿಲ್ಲ.

ಉತ್ತರ ಕೊರಿಯಾದಲ್ಲಿ ಕೊರೋನಾ ಕೇಸುಗಳೇ ಇಲ್ವಂತೆ, ಯಾಕೆ?

ಇದೇ ವೇಳೆ ಸಿಎನ್‌ಎನ್‌ ಸುದ್ದಿವಾಹಿನಿ, ಅಮೆರಿಕದ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ಕಿಮ್‌ ಜಾಂಗ್‌ ಉನ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಕಿಂಗ್‌ ಜಾಂಗ್‌ ಏ.15ರಂದು ತಮ್ಮ ತಾತನ 108ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳದೇ ಇರುವುದು ಸಾಕಷ್ಟುಊಹಾಪೋಹಗಳಿಗೆ ಕಾರಣವಾಗಿದೆ. ಅಲ್ಲದೆ ಕಿಮ್‌ ಜಾಂಗ್‌ ಏ.11ರಂದು ರಾಜಕೀಯ ಸಭೆಯೊಂದರಲ್ಲಿ ಪಾಲ್ಗೊಂಡ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

Video Top Stories