UK PM Rishi Sunak: ರಿಷಿ ಸೂತ್ರದಿಂದ ಬ್ರಿಟನ್ ಅದೃಷ್ಟ ಖುಲಾಯಿಸುತ್ತಾ?
ಬ್ರಿಟನ್ ಗದ್ದುಗೆ ಮೇಲೆ ಕೂರಲಿದ್ದಾರೆ ಭಾರತೀಯ. ಅಗ್ನಿಪರೀಕ್ಷೆ ಗೆದ್ದು ಬೀಗಿದ್ದಾಯ್ತು ಕರುನಾಡ ಅಳಿಯ. ರಿಷಿ ಸುನಕ್ ಸೂತ್ರದಿಂದ ಬ್ರಿಟನ್ ಅದೃಷ್ಟ ಖುಲಾಯಿಸುತ್ತಾ? 42ನೇ ವರ್ಷಕ್ಕೇ ಪಟ್ಟವೇರಿದ ಬ್ರಿಟನ್‌ನ ಕಿರಿಯ ಪ್ರಧಾನಿ, ಸೋತು ಗೆದ್ದದ್ದು ಹೇಗೆ? ವಿದ್ಯಾರ್ಥಿ ಭವನದಲ್ಲಿ ಇನ್ಫೋಸಿಸ್ ಅಳಿಯ ಮಾಡಿದ್ದೇನು ಗೊತ್ತಾ? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ರಿಷಿ ದೀಪಾವಳಿ!
ಬ್ರಿಟನ್ ಗದ್ದುಗೆ ಮೇಲೆ ಕೂರಲಿದ್ದಾರೆ ಭಾರತೀಯ. ಅಗ್ನಿಪರೀಕ್ಷೆ ಗೆದ್ದು ಬೀಗಿದ್ದಾಯ್ತು ಕರುನಾಡ ಅಳಿಯ. ರಿಷಿ ಸುನಕ್ ಸೂತ್ರದಿಂದ ಬ್ರಿಟನ್ ಅದೃಷ್ಟ ಖುಲಾಯಿಸುತ್ತಾ? 42ನೇ ವರ್ಷಕ್ಕೇ ಪಟ್ಟವೇರಿದ ಬ್ರಿಟನ್‌ನ ಕಿರಿಯ ಪ್ರಧಾನಿ, ಸೋತು ಗೆದ್ದದ್ದು ಹೇಗೆ? ವಿದ್ಯಾರ್ಥಿ ಭವನದಲ್ಲಿ ಇನ್ಫೋಸಿಸ್ ಅಳಿಯ ಮಾಡಿದ್ದೇನು ಗೊತ್ತಾ? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ರಿಷಿ ದೀಪಾವಳಿ! ಹೇಗಿದೆ ಬ್ರಿಟನ್ ಪರಿಸ್ಥಿತಿ..? ಅದೆಷ್ಟು ದಾರುಣವಾಗಿದೆ ಶ್ರೀಮಂತ ದೇಶದ ಹಣೆ ಬರಹ..? ರಿಷಿ ಸುನಕ್ ಮುಂದಿರೋ ಅತೊ ದೊಡ್ಡ ಸವಾಲುಗಳು ಏನು..? ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ನಾವೆಲ್ಲರೂ ಅದೇ ಖುಷೀಲಿ ಇನ್ನೂ ಜೋರಾಗೇ ದೀಪಾವಳಿ ಆಚರಿಸ್ತೀವಿ.. ಬ್ರಿಟನ್ ಕೂಡ ಸಂಭ್ರಮಿಸುತ್ತೆ. ಆದ್ರೆ, ಆ ಸಂಭ್ರಮದ ಹಿಂದೆ ದೊಡ್ಡ ವಿಷಾದವೇ ಅಡಗಿದೆ. ರಿಷಿ ಸುನಕ್ ಪ್ರಧಾನಿಯಾಗಿದ್ದು ಸವಾಲಲ್ಲ. ಅದಕ್ಕಿಂತಾ ದೊಡ್ಡ ಸವಾಲು ಶುರುವಾಗೋದೇ ಇಲ್ಲಿಂದ ಮುಂದೆ. ಬ್ರಿಟನ್ ಆರ್ಥಿಕತೆ ಈಗಲ್ಲ. ಕಳೆದ ಚುನಾವಣೆ ಹೊತ್ತಿನಲ್ಲೇ ಹಾದಿ ತಪ್ಪಿತ್ತು. ಆಗ ಲಿಸ್ ಟ್ರಸ್, ಇದೆಲ್ಲಾ ತಾತ್ಕಾಲಿಕ ಹಿನ್ನಡೆ ಅಷ್ಟೆ. ಅದೇನೇ ಆಗ್ಲಿ, ನಿಮ್ಮ ಜೊತೆ ನಾನಿದೀನಿ, ತೆರಿಗೆ ಕಡಿತ ಮಾಡ್ತೀನಿ. ಬಿಟ್ಟಿ ಪವರ್ ಸಪ್ಲೈ ಮಾಡ್ತೀನಿ ಅಂತ ಹೇಳಿದ್ರು. ಆದ್ರೆ, ಫ್ರೀಯಾಗಿ ಕೊಡೋದು ಎಂಥಾ ಡೇಂಜರ್ ಅನ್ನೋದು ಬ್ರಿಟನ್ ಸರ್ಕಾರಕ್ಕೆ ಈಗ ಮನವರಿಕೆಯಾಗಿದೆ. ಮುಂದೆ ರಿಷಿ ಸುನಕ್ ಏನು ಮಾಡಲಿದ್ದಾರೆ.?