ಮೆಕ್ಸಿಕೋದಲ್ಲೊಂದು ನಿಗೂಢ ಗೊಂಬೆಗಳ ಭಯಾನಕ ದ್ವೀಪ: ಬೆಚ್ಚಿ ಬೀಳಿಸುತ್ತವೆ ಈ ಗೊಂಬೆಗಳು

ಮೆಕ್ಸಿಕೋದ ಡಾಲ್ಸ್‌ ಆಫ್ ಐಲ್ಯಾಂಡ್ ಎಂಬ ದ್ವೀಪವೊಂದಿದ್ದು, ಅದರ ನಿಗೂಢತೆ, ಅಲ್ಲಿ ನಡೆಯುವ ಚಿತ್ರವಿಚಿತ್ರ ಘಟನೆಗಳ ಬಗ್ಗೆ ವಿಡಿಯೋದಲ್ಲಿದೆ. 

First Published Sep 14, 2022, 5:38 PM IST | Last Updated Sep 14, 2022, 5:38 PM IST

ಪ್ರಪಂಚದಲ್ಲಿ ನಡೆಯುವ ಕೆಲ ಚಿತ್ರ ವಿಚಿತ್ರ ನಿಗೂಢ ಘಟನೆಗಳು ಜನರನ್ನು ಬೆಚ್ಚಿಬೀಳಿಸುತ್ತದೆ. ನೀವು ಭೂತ ಪ್ರೇತಗಳ ಹಲವು ಸಿನಿಮಾಗಳನ್ನು ನೋಡಿರಬಹುದು. ಆದರೆ ಈ ಸಿನಿಮಾಗಳಿಗೆ ಪ್ರೇರಣೆ ಆಗಿರುವುದು ಕೆಲವು ನಿಜ ಘಟನೆಗಳೇ ಅದೇ ರೀತಿ ಒಂದು ವಿಚಿತ್ರ ಪ್ರದೇಶದ ವಿಚಿತ್ರ ಘಟನೆಯ ಬಗ್ಗೆ ನಾವಿಂದು ನಿಮಗೆ ಹೇಳುತ್ತೇವೆ. ಇದು ಮೆಕ್ಸಿಕೋದಲ್ಲಿ ಇರುವ ಅತ್ಯಂತ ಭಯಾನಕವಾದ ಐಲ್ಯಾಂಡ್, ಇಲ್ಲಿರುವುದು ಬರೀ ಗೊಂಬೆಗಳ ಸಾಮ್ರಾಜ್ಯ, ಇಲ್ಲಿ ಒಂದೊಂದು ಗೊಂಬೆ ಒಂದೊಂದು ರೀತಿ ಇರುತ್ತದೆ. ಒಂದು ಗೊಂಬೆಗೆ ಕಣ್ಣಿಲ್ಲದಿದ್ದರೆ ಮತ್ತೊಂದು ಗೊಂಬೆಗೆ ತಲೆಯೇ ಇರುವುದಿಲ್ಲ. ಈ ಪುಟ್ಟ ದ್ವೀಪದಲ್ಲಿ ನಡೆಯುತ್ತೆ ಗೊಂಬೆಗಳದ್ದೇ ಹುಕುಂ, ಒಂದಕ್ಕಿಂತ ಒಂದು ವಿಕಾರವಾದ ಗೊಂಬೆಗಳನ್ನ ಇಲ್ಲಿ ನೋಡಬಹುದು. ಆದರೆ ಅಲ್ಲಿ ಗೊಂಬೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಂತೆ. ಐ ಲ್ಯಾಂಡ್ ಆಫ್ ಡಾಲ್ಸ್‌ನ ರೋಚಕ ಕತೆ ಈ ವಿಡಿಯೋದಲ್ಲಿದೆ ವೀಕ್ಷಿಸಿ.