Asianet Suvarna News Asianet Suvarna News

ಸಮರದ ಮಾತು ಬಿಟ್ಟು ಸಂಧಾನಕ್ಕೆ ಮುಂದಾದ ಚೀನಾ; ಮೋದಿ ಕೊಟ್ಟ ಮಾಸ್ಟರ್‌ ಸ್ಟ್ರೋಕ್‌ಯೇನು?

ಕಳೆದೊಂದು ತಿಂಗಳಿನಿಂದ ಪೂರ್ವ ಲಡಾಖ್‌ ಭಾಗದಲ್ಲಿ ಉದ್ಭವಿಸಿರುವ ಗಡಿ ಸಂಘರ್ಷವನ್ನು ಕೊನೆಗಾಣಿಸಲು ಭಾರತ ಹಾಗೂ ಚೀನಾ ನಡುವೆ ಸೇನಾಧಿಕಾರಿಗಳ ಮಟ್ಟದ ಮಾತುಕತೆ  ಮಾತುಕತೆ ನಡೆಸಿವೆ. ಮಾತುಕತೆಯ ವಿವರಗಳನ್ನು ಎರಡೂ ದೇಶಗಳು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಎರಡೂ ದೇಶಗಳು ತಮ್ಮ ನಿಲುವಿನ ವಿಚಾರವಾಗಿ ಬಿಗಿಪಟ್ಟು ಹಿಡಿದಿವೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ (ಜೂ. 07):  ಕಳೆದೊಂದು ತಿಂಗಳಿನಿಂದ ಪೂರ್ವ ಲಡಾಖ್‌ ಭಾಗದಲ್ಲಿ ಉದ್ಭವಿಸಿರುವ ಗಡಿ ಸಂಘರ್ಷವನ್ನು ಕೊನೆಗಾಣಿಸಲು ಭಾರತ ಹಾಗೂ ಚೀನಾ ನಡುವೆ ಸೇನಾಧಿಕಾರಿಗಳ ಮಟ್ಟದ ಮಾತುಕತೆ ನಡೆಸಿವೆ. ಮಾತುಕತೆಯ ವಿವರಗಳನ್ನು ಎರಡೂ ದೇಶಗಳು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಎರಡೂ ದೇಶಗಳು ತಮ್ಮ ನಿಲುವಿನ ವಿಚಾರವಾಗಿ ಬಿಗಿಪಟ್ಟು ಹಿಡಿದಿವೆ ಎಂದು ಮೂಲಗಳು ತಿಳಿಸಿವೆ.

ಗಡಿ ಸಮಸ್ಯೆ ಸಭೆ: ಭಾರತ, ಚೀನಾ ಬಿಗಿಪಟ್ಟು!

ಮೂರು ತಾಸು ನಡೆದ ಈ ಸಭೆ ವೇಳೆ, ಏಪ್ರಿಲ್‌ಗೆ ಮುನ್ನ ಲಡಾಖ್‌ ಗಡಿಯ ಪ್ಯಾಂಗೋಂಗ್‌ ಸರೋವರ ಪ್ರದೇಶದಲ್ಲಿ ಯಾವ ಸ್ಥಿತಿ ಇತ್ತೋ, ಅದನ್ನೇ ಪುನಾಸ್ಥಾಪಿಸಬೇಕು. ಜತೆಗೆ ಗಲ್ವಾನ್‌ ಕಣಿವೆಯಲ್ಲಿ ಚೀನಾ ತನ್ನ ಸೇನಾ ಬಲವನ್ನು ಕಡಿತಗೊಳಿಸಬೇಕು. ಹೆಚ್ಚುವರಿ ಯೋಧರನ್ನು ಅವರ ಮೂಲ ನೆಲೆಗಳಿಗೆ ವಾಪಸ್‌ ಕಳಿಸಬೇಕು ಎಂದು ಭಾರತ ಪ್ರಮುಖವಾಗಿ ಪ್ರಸ್ತಾಪಿಸಿತು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

 

Video Top Stories