Asianet Suvarna News Asianet Suvarna News

Kim Jong Un: ವಿಶ್ವದ ಕಣ್ತಪ್ಪಿಸಿ ಯುದ್ಧಕ್ಕೆ ಸಿದ್ದನಾದ ಸರ್ವಾಧಿಕಾರಿ ಕಿಮ್!

ಉತ್ತರಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಡೀ ಜಗತ್ತು ತನ್ನ ಕಟ್ರೋಲ್ ನಲ್ಲಿ ಇರಬೇಕೆಂದು ಭಯಸುತ್ತಿದ್ದು, ಅದಕ್ಕಾಗಿ ಹೈಪರ್ ಸಾನಿಕ್ ಹಾಗೂ ಬ್ಯಾಲಿಸ್ಟಿಕ್ ಎಂಬ ಎರಡು ಭಯಾನಕ ಕ್ಷಿಪಣಿಯನ್ನು ತಯಾರು ಮಾಡಿ ಇಟ್ಟುಕೊಂಡಿದ್ದಾನೆ.

ಸಿಯೋಲ್(ಜ.17): ಉತ್ತರಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್   ವಿಶ್ವದ ವಿರುದ್ಧ ಯುದ್ಧ ನಡೆಸಲು ಸಂಚು ರೂಪಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಇಡೀ ಜಗತ್ತು ತನ್ನ ಕಟ್ರೋಲ್ ನಲ್ಲಿ ಇರಬೇಕೆಂದು ಭಯಸುತ್ತಿರುವ ಕಿಮ್ ಅದಕ್ಕಾಗಿ ಹೈಪರ್ ಸಾನಿಕ್ ಹಾಗೂ ಬ್ಯಾಲಿಸ್ಟಿಕ್ ಎಂಬ ಎರಡು ಭಯಾನಕ ಕ್ಷಿಪಣಿಯನ್ನು ತಯಾರು ಮಾಡಿ ಇಟ್ಟುಕೊಂಡಿದ್ದಾನೆ. ಆಗಾಗ ಕ್ಷಿಪಣಿ ಪ್ರಯೋಗಿಸುತ್ತಿರುವ ಕಿಮ್ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ಇದೇ ರೀತಿಯ ಖತರ್ನಾಕ್ ಕೆಲಸಗಳಿಗೆ.

ಅರ್ಜೆಂಟೀನಾ ನಗರವನ್ನು ಭಾದಿಸುತ್ತಿರುವ ಲಕ್ಷಾಂತರ ಜೀರುಂಡೆಗಳು... ವಿಡಿಯೋ ನೋಡಿ

ಇತ್ತೀಚೆಗೆ ಆತ ತನ್ನ ದಢೂತಿ ದೇಹ ಇಳಿಸಿಕೊಂಡು ಸುದ್ದಿಯಾಗಿದ್ದ. ಇಷ್ಟು ದಿನ ತನ್ನ ಪರಮಶತ್ರು ದಕ್ಷಿಣ ಕೊರಿಯಾವನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕೆಂದು ಅಂದುಕೊಂಡಿದ್ದ ಕಿಮ್ ಈಗ ಇಡೀ ವಿಶ್ವವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಮುಂದಾಗಿದ್ದಾನೆ.  ಅದಕ್ಕಾಗಿ ಎರಡು ಕ್ಷಿಪಣಿಗಳನ್ನು ಇಟ್ಟು ಹೆದರಿಸುತ್ತಿದ್ದಾನೆ. ಈಗಾಗಲೇ ತನ್ನ ಅಣ್ವಸ್ತ್ರ ಕ್ಷಿಪಣಿಗಳ ಪ್ರಯೋಗ ನಡೆಸಿ ವಿಶ್ವದ ಕೆಂಗಣ್ಣಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗುರಿಯಾಗಿದ್ದಾನೆ.  ಈ ನಡುವೆ ವಿಶ್ವವನ್ನೇ ತನ್ನ ಕೈಯಡಿಯಲ್ಲಿ ಇಟ್ಟುಕೊಳ್ಳುವ ಆಸೆ ಹೊಂದಿದ್ದಾನೆ. ಈ ಕ್ಷಿಪಣಿ ಮಾಡಿರುವುದೇ ಅಮೆರಿಕವನ್ನು ಗುರಿಯಾಗಿಸಿ. ಅಮೆರಿಕದ ಅಲಸ್ಕಾ ಪ್ರಾಂತ್ಯವನ್ನು ನಾಶ ಮಾಡುವ ನಿಟ್ಟಿನಲ್ಲಿ ಏಕೆಂದರೆ ಇಲ್ಲಿ ಅಮೆರಿಕದ ಕ್ಷಿಪಣಿ ನಿರ್ವಹಣಾ ಕೇಂದ್ರವಿದೆ.

Video Top Stories