ಕೆಂಪುಕೋಟೆ ಬೆನ್ನಲ್ಲೇ ಅಮೆರಿಕದ ನ್ಯೂಯಾರ್ಕ್‌ನಲ್ಲೂ ಖಲಿಸ್ತಾನಿ ಧ್ವಜದ ಪರೇಡ್!
ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಐತಿಹಾಸಿಕ ಸ್ಮಾರಕದ ಮೇಲೆ ಸಿಖ್ ಧ್ವಜಾರೋಹಣ ಮಾಡಿದ ಘಟನೆ ದೇಶಾದ್ಯಂತ ತೀವ್ರ ಖಂಡನೆಗೊಳಗಾಗಿದೆ. ಹೀಗಿರುವಾಗಲೇ ಅತ್ತ ಅಮೆರಿಕ ನ್ಯೂಯಾರ್ಕ್‌ನಲ್ಲೂ ನಡೆದ ಕಾರು ಪರೇಡ್ ಭಾರೀ ಸದ್ದು ಮಾಡಲಾರಂಭಿಸಿದೆ.
ನ್ಯೂಯಾರ್ಕ್(ಜ.27)ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಐತಿಹಾಸಿಕ ಸ್ಮಾರಕದ ಮೇಲೆ ಸಿಖ್ ಧ್ವಜಾರೋಹಣ ಮಾಡಿದ ಘಟನೆ ದೇಶಾದ್ಯಂತ ತೀವ್ರ ಖಂಡನೆಗೊಳಗಾಗಿದೆ. ಹೀಗಿರುವಾಗಲೇ ಅತ್ತ ಅಮೆರಿಕ ನ್ಯೂಯಾರ್ಕ್‌ನಲ್ಲೂ ನಡೆದ ಕಾರು ಪರೇಡ್ ಭಾರೀ ಸದ್ದು ಮಾಡಲಾರಂಭಿಸಿದೆ.
ಹೌದು ಜನವರಿ 26ರಂದು ನ್ಯೂಯಾರ್ಕ್‌ನ ರಸ್ತೆಯಲ್ಲಿ ಕಾರು ಪರೇಡ್ ನಡೆದಿದೆ. ಇದು ಸಾಮಾನ್ಯ ಪರೇಡ್ ಆಗಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಪರೇಡ್ ವೇಳೆ ಕಾರುಗಳಲ್ಲಿ ಖಲಿಸ್ಥಾನಿ ಧ್ವಜ ಹಾರಾಡುತ್ತಿದ್ದವೆಂಬುವುದು ಉಲ್ಲೇಖನೀಯ.
ಭಾರತದಲ್ಲಿ ನಡೆದ ಘಟನೆಯ ಬೆನ್ನಲ್ಲೇ ನ್ಯೂಯಾರ್ಕ್‌ನ ಈ ದೃಶ್ಯಾವಳಿಗಳು ಕಭಾರೀ ವೈರಲ್ ಆಗಿವೆ.