Asianet Suvarna News Asianet Suvarna News

ಸೌದಿ ಅರೇಬಿಯಾದಲ್ಲಿ ಕನ್ನಡಿಗರ ಪರದಾಟ: ರಾಜ್ಯಕ್ಕೆ ವಾಪಸ್‌ ಕರೆಸಿಕೊಳ್ಳಲು ಮನವಿ

ತಾಯ್ನಾಡಿಗೆ ಮರಳಲು ಕನ್ನಡಿಗರು ಪರದಾಟ| ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸುಮಾರು ಮೂರು ಸಾವಿರ ಕನ್ನಡಿಗರು| ಕರ್ನಾಟಕಕ್ಕೆ ಮರಳಲು ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ|

First Published May 31, 2020, 12:26 PM IST | Last Updated May 31, 2020, 12:55 PM IST

ಬೆಂಗಳೂರು(ಮೇ.31): ತಾಯ್ನಾಡಿಗೆ ಮರಳಲು ಕನ್ನಡಿಗರು ಪರದಾಡುತ್ತಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಸುಮಾರು ಮೂರು ಸಾವಿರ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇವರೆಲ್ಲ ಕರ್ನಾಟಕಕ್ಕೆ ಮರಳಲು ರಾಯಭಾರಿ ಕಚೇರಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೂ ಕೂಡ ರಾಜ್ಯಕ್ಕೆ ಮರಳಲು ಅಗುತ್ತಿಲ್ಲ. 

ಕೊರೋನಾ ರಿಪೋರ್ಟ್ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದ 600 ಜನ ರಿಲೀಸ್..!

ಪಕ್ಕದ ರಾಜ್ಯ ಕೇರಳದಲ್ಲಿ ಸೌದಿ ಅರೇಬಿಯಾದಿಂದ ಕರೆತರಲು ಬರೋಬ್ಬರಿ 80  ವಿಮಾನಗಳ ವ್ಯವಸ್ಥೆ ಮಾಡಿದೆ. ಅದರೆ, ಕರ್ನಾಟಕದಿಂದ ಒಂದೇ ಒಂದು ವಿಮಾನ ಸೌದಿಗೆ ಬಂದಿಲ್ಲ ಎಂದು ಕನ್ನಡಿಗರ ಅಳಲಾಗಿದೆ. 
 

Video Top Stories