9 ದಿನಗಳಲ್ಲಿ 40 ಆದೇಶ, ಬೈಡೆನ್ ದಾಖಲೆ, ಶಂಕಿತ ಉಗ್ರರಿಗೂ ಕೊರೋನಾ ಲಸಿಕೆ
ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 9 ದಿನಗಳಲ್ಲಿ ಜೋ ಬೈಡೆನ್ ಬರೋಬ್ಬರಿ 40 ಆದೇಶಗಳಿಗೆ ಅಂಕಿತ ಹಾಕುವ ಮೂಲಕ ದಾಖಲೆ ನಿರ್ಮಿಸಿದ್ದಾರೆ!
ವಾಷಿಂಗ್‌ಟನ್ (ಜ. 30): ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 9 ದಿನಗಳಲ್ಲಿ ಜೋ ಬೈಡೆನ್ ಬರೋಬ್ಬರಿ 40 ಆದೇಶಗಳಿಗೆ ಅಂಕಿತ ಹಾಕುವ ಮೂಲಕ ದಾಖಲೆ ನಿರ್ಮಿಸಿದ್ದಾರೆ! ಕೊರೋನಾವೈರಸ್ ಸೋಂಕಿಗೆ ಜಾನ್ಸನ್ & ಜಾನ್ಸನ್ ಕಂಪನಿ ಅಭಿವೃದ್ಧಿಪಡಿಸಿರುವ ಒನ್-ಶಾಟ್ ಲಸಿಕೆಯ ಫೇಸ್ ತ್ರಿ ಫಲಿತಾಂಶಗಳು ಪ್ರಕಟವಾಗಿದ್ದು, ಕಂಪನಿಯ ಪ್ರಕಾರ ಹೊಸ ಲಸಿಕೆ ಶೇ.66ರಷ್ಟು ಪರಿಣಾಮಕಾರಿಯಾಗಿದೆಯಂತೆ! ಅಮೆರಿಕಾದಲ್ಲಿ ಜೈಲಿನಲ್ಲಿರುವ ಶಂಕಿತ ಉಗ್ರರಿಗೆ ಬೈಡೆನ್ ಸರ್ಕಾರ ಲಸಿಕೆ ಕೊಡಲು ಹೊರಟಿರುವುದು ವಿವಾದ ಹುಟ್ಟುಹಾಕಿದೆ.
ಸಿಂಘೂ ಗಡಿಯಲ್ಲಿ ಸಂಘರ್ಷ : ದಾರಿ ತಪ್ಪಿತಾ ರೈತ ಹೋರಾಟ..?
ಡೊನಾಲ್ಡ್ ಟ್ರಂಪ್‌ರನ್ನು ಗುರುತಿಸಿ, ಅಧ್ಯಕ್ಷರಾಗಿ ಆಯ್ಕೆಯಾಗುವ ಮಟ್ಟಿಗೆ ಬೆಳೆಸಿದ್ದೇ ರಷ್ಯಾ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಮೆರಿಕಾ ಅಬ್ಲಾಕ್ ಲೈವ್ಸ್ ಮ್ಯಾಟರ್ ಚಳುವಳಿಯನ್ನು 2021ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ವಿವರ ಟ್ರೆಂಡಿಂಗ್ ನ್ಯೂಸ್‌ನಲ್ಲಿ..