ಡ್ಯಾನ್ಸರ್‌ಗಳ ಮೇಲೆ ಬಿದ್ದ ಬೃಹತ್ ಎಲ್‌ಇಡಿ ಸ್ಕ್ರೀನ್! ಮುಂದೇನಾಯ್ತು?

ಸ್ಟೇಜ್‌ನಲ್ಲಿ ಡಾನ್ಸ್‌ ಶೋ ನೀಡುತ್ತಿದ್ದ ವೇಳೆ ನೃತ್ಯ ಮಾಡುತ್ತಿದ್ದವರ ಮೇಲೆಯೇ ಬೃಹತ್ ಆದ ಎಲ್‌ಇಡಿ ಪರದೆಯೊಂದು ಕುಸಿದು ಬಿದ್ದಿದ್ದು, ಕೆಲ ಡಾನ್ಸರ್‌ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. 
 

First Published Aug 2, 2022, 5:44 PM IST | Last Updated Aug 2, 2022, 5:44 PM IST

ಅಪಾಯಗಳು ಹೇಳಿ ಕೇಳಿ ಬರುವುದಿಲ್ಲ. ಕೆಲವೊಮ್ಮೆ ಅಚಾನಕ್ ಆಗಿ ಎದುರಾಗುವ ಅಪಾಯಗಳು ಜೀವಕ್ಕೆ ಎರವಾಗುತ್ತವೆ. ಕೆಲ ದಿನಗಳ ಹಿಂದೆ ಚೀನಾದ ಹಾಂಗ್‌ಕಾಂಗ್‌ನಲ್ಲಿ ನಡೆದ ಭಯಾನಕ ಘಟನೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟೇಜ್‌ನಲ್ಲಿ ಡಾನ್ಸ್‌ ಶೋ ನೀಡುತ್ತಿದ್ದ ವೇಳೆ ನೃತ್ಯ ಮಾಡುತ್ತಿದ್ದವರ ಮೇಲೆಯೇ ಬೃಹತ್ ಆದ ಎಲ್‌ಇಡಿ ಪರದೆಯೊಂದು ಕುಸಿದು ಬಿದ್ದಿದ್ದು, ಕೆಲ ಡಾನ್ಸರ್‌ಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.