Asianet Suvarna News Asianet Suvarna News

Viral News: ಟೇಕ್​ಆಫ್​ ಆದ ಹೆಲಿಕಾಪ್ಟರ್ ವಿದ್ಯುತ್​ ತಂತಿಗೆ ಡಿಕ್ಕಿ!

ಜಗತ್ತಿನಾದ್ಯಂತ ವಿಮಾನ ಹೆಲಿಕಾಪ್ಟರ್ ದುರಂತದ ಹಲವು ಪ್ರಕರಣಗಳು ಇದುವರೆಗೆ ನಡೆದಿವೆ. ಅದೇ ರೀತಿ ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಹೆಲಿಕಾಪ್ಟರ್‌ವೊಂದು ಅವಘಡಕ್ಕೀಡಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೆಲಿಕಾಪ್ಟರ್‌ಗಳ ಮೇಲೆ ಸಂಚರಿಸುವುದು ಸಾವಿನ ಹಿಂದೆ ಸಂಚರಿಸಿದಂತೆ, ಅವುಗಳಿಗೆ ಯಾವಾಗ ಏನಾಗುವುದೋ ಹೇಳಲಾಗದು. ಹೆಲಿಕಾಪ್ಟರ್ ದುರಂತದ ಹಲವು ಭಯಾನಕ ದೃಶ್ಯಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೇನಾ ಮುಖ್ಯಸ್ಥರೇ ಇಂತಹ ದುರಂತವೊಂದರಲ್ಲಿ ಪ್ರಾಣ ತೆತ್ತಿದ್ದರು. ಜಗತ್ತಿನಾದ್ಯಂತ ವಿಮಾನ ಹೆಲಿಕಾಪ್ಟರ್ ದುರಂತದ ಹಲವು ಪ್ರಕರಣಗಳು ಇದುವರೆಗೆ ನಡೆದಿವೆ. ಅದೇ ರೀತಿ ಇತ್ತೀಚೆಗೆ ಬ್ರೆಜಿಲ್‌ನಲ್ಲಿ ಹೆಲಿಕಾಪ್ಟರ್‌ವೊಂದು ಅವಘಡಕ್ಕೀಡಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಇದು ಬ್ರೆಜಿಲ್‌ನಲ್ಲಿ ನಡೆದ ಅಪಘಾತವಾಗಿದೆ. ಬ್ರೆಜಿಲ್‌ನ ಸಂಸದರೊಬ್ಬರು ಈ ಹೆಲಿಕಾಪ್ಟರ್‌ನಲ್ಲಿ ಸಂಚರಿಸುತ್ತಿದ್ದರು. ಈ ಹೆಲಿಕಾಪ್ಟರ್ ಟೇಕ್ಆಫ್ ಆಗಿ ಸೆಕೆಂಡುಗಳಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಕೆಳಗೆ ಬಿದ್ದಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಸಂಸದರು ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದೆ. 

Video Top Stories