ಒಬ್ಬನ ಬಿಡಿಸಿಕೊಳ್ಳಲು ಇಸ್ರೇಲ್ ಮಾಡಿತ್ತು ಅತೀ ದೊಡ್ಡ ತ್ಯಾಗ, ಪುಟ್ಟ ರಾಷ್ಟ್ರ ಕಲಿಸಿದ ಪಾಠ!

ಒಬ್ಬನಿಗೋಸ್ಕರ, ಯಾರೂ ಊಹಿಸಲು ಸಾಧ್ಯವಾಗದ ಒಪ್ಪಂದಕ್ಕೆ ಇಸ್ರೇಲ್ ಮುಂದಾಗಿತ್ತು.ಅವತ್ತು ನಡೆದ ಒಪ್ಪಂದ, ಇಸ್ರೇಲಿನ ಇತಿಹಾಸ ಬದಲಿಸಿತ್ತು. ಅಷ್ಟಕ್ಕೂ, ಅವತ್ತು ಇಸ್ರೇಲ್ ಮಾಡಿಕೊಂಡ ಒಪ್ಪಂದ ಏನು? ಅದರ ಪರಿಣಾಮ ಏನು?

First Published Dec 8, 2024, 12:56 PM IST | Last Updated Dec 8, 2024, 12:56 PM IST

ಈತ ಇಸ್ರೇಲಿನ ದೊಡ್ಡ ಸೆಲೆಬ್ರಿಟಿಯಂತೂ ಆಗಿರ್ಲಿಲ್ಲ.. ಆದ್ರೂ ಈತನಿಗೋಸ್ಕರ, 5 ವರ್ಷಗಳ ಕಾಲ ಉಗ್ರರ ಜೊತೆ ಬಾರ್ಗೇನ್ ಮಾಡಿತ್ತು ಇಸ್ರೇಲ್ ಸರ್ಕಾರ. ರಾಕ್ಷಸರ ವಶದಲ್ಲಿದ್ದ ಈತನನ್ನ ಶತಾಯ ಗತಾಯ ಬಿಡಿಸಿಕೊಳ್ಳೋದಕ್ಕೆ, ಈತನೊಬ್ಬನಿಗಾಗಿ, 1027 ಮಂದಿ ಪ್ಯಾಲೆಸ್ತೇನಿ ಬಂಧಿತರನ್ನ ಬಿಡುಗಡೆ ಮಾಡಿತ್ತು.. ಅಷ್ಟಕ್ಕೂ ಇವನ್ಯಾರು ಗೊತ್ತಾ.?