ಕ್ರಿಸ್ಮಸ್ ಮೋಜು, ಭೂಕಂಪನದ ಅನುಭವ, ಜೊ ಶ್ವಾನಗಳ ವಿಶ್, ಕೊರೊನಾಗೆ ಬರಲಿದೆ ಹೊಸ ಮದ್ದು!
ಜನರು ಕ್ರಿಸ್ಮಸ್ ಸಂಭ್ರಮದಲ್ಲಿರುವಾಗಲೇ ಫಿಲಪಿನ್ಸ್‌ನ ಬಟಂಗಾಸ್‌ನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಕಂಪನದ ತೀವ್ರತೆ 6.3 ಎಂದು ದಾಖಲಾಗಿದೆ.
ವಾಷಿಂಗ್‌ಟನ್ (ಡಿ. 25): ಜನರು ಕ್ರಿಸ್ಮಸ್ ಸಂಭ್ರಮದಲ್ಲಿರುವಾಗಲೇ ಫಿಲಪಿನ್ಸ್‌ನ ಬಟಂಗಾಸ್‌ನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಕಂಪನದ ತೀವ್ರತೆ 6.3 ಎಂದು ದಾಖಲಾಗಿದೆ. ಜೊ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಅವರು ಚಾಂಪ್ ಮತ್ತು ಮೇಜರ್ ಎಂಬ ಜರ್ಮನ್ ಶೆಫರ್ಡ್ ಶ್ವಾನಗಳು ಇದೀಗ ಕ್ರಿಸ್ಮಸ್ ವಿಶ್ ಮಾಡಿ ಸದ್ದು ಮಾಡುತ್ತಿವೆ.
ಕೊರೊನಾ ಲಸಿಕೆಯಲ್ಲಿ ಹಂದಿ ಅಂಶ; ಔಷಧಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಬೋರ್ಡ್!
ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಕ್ರಿಸ್ಮಸ್ ಸಂದರ್ಭದಲ್ಲಿ ಜನತೆಗೆ ಶುಭ ಹಾರೈಸಿದ್ದಾರೆ. ಇದೀಗ ಕೊರೋನಾ ವೈರಸ್ ವಿರುದ್ಧ ಹೋರಾಡಲು ಎದೆಹಾಲನ್ನು ಬಳಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಸೋಂಕಿನಿಂದ ಗುಣಮುಖವಾದವರ ಪ್ಲಾಸ್ಮಾ ಬಳಸಿ, ರೋಗಿಗೆ ನೀಡುವ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ ಆ್ಯಂಟಿಬಾಡೀಸ್ ಬಳಸಿ ಚಿಕಿತ್ಸೆ ನೀಡಲು ಅಮೆರಿಕದ ಗೋರಮ್ ಮೇನ್‌ನಲ್ಲಿ ಎದೆ ಹಾಲು ಸಂಗ್ರಹಿಸಲಾಗುತ್ತಿದೆ. ಇವೆಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ..!