Asianet Suvarna News Asianet Suvarna News

ಪ್ರಧಾನಿ ಮೋದಿ ಇಡೀ ವಿಶ್ವಕ್ಕೇ ಪ್ರೇರಣೆ ಎಂದ ಡೆನ್ಮಾರ್ಕ್ ಪ್ರಧಾನಿ!

Oct 9, 2021, 3:38 PM IST

ನವದೆಹಲಿ(ಆ.09): ಡೆನ್ಮಾರ್ಕ್‌ನ(Denmark) ಪ್ರಧಾನಿ ಮೆಟ್ಟಿ ಫ್ರೆಡೆರಿಕ್ಸನ್‌(Mette Frederiksen) ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ನವೀಕರಿಸಬಹುದಾದ ಇಂಧನ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ಕುರಿತು ಉಭಯ ನಾಯಕರ ನಡುವೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಮಾತನಾಡಿದ ಡೆನ್ಮಾರ್ಕ್ ಪ್ರಧಾನಿ, ಭಾರತದ ಪಿಎಂ ನರೇಂದ್ರ ಮೋದಿ(narendra Modi) ಇಡೀ ವಿಶ್ವಕ್ಕೇ ಪ್ರೇರಣೆ ಎಂದಿದ್ದಾರೆ

ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಅವರು ಫ್ರೆಡೆರಿಕ್ಸನ್‌ ಅವರನ್ನು ಸ್ವಾಗತಿಸಿದರು. ಡ್ಯಾನಿಶ್ ಪ್ರಧಾನಿಯು ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು.