Asianet Suvarna News Asianet Suvarna News

Covid 19: 2022 ರಲ್ಲಿ ಕೊನೆಗೊಳ್ಳಲಿದೆಯಾ ಕೊರೋನಾ.? ಭರವಸೆ ಮೂಡಿಸಿದ WHO ವಿಜ್ಞಾನಿಗಳ ಭವಿಷ್ಯ

ಕಳೆದ ಎರಡು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ಸಾಂಕ್ರಾಮಿಕವು 2022 ರ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು WHO ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. 

ನವದೆಹಲಿ (ಜ. 21): 2 ನೇ ಅಲೆ ತಗ್ಗಿದ ಬಳಿಕ ಕೊಂಚ ಇಳಿಮುಖವಾಗಿದ್ದ ಕೊರೊನಾ, ಮತ್ತೆ ಏರಿಕೆಯಾಗಿದೆ. 3 ನೇ ಅಲೆ ಅಪಾಯಕಾರಿಯಾಗಿ ಕಾಣಿಸದಿದ್ದರೂ ಸೋಂಕು ಮಾತ್ರ ಹೆಚ್ಚುತ್ತಿದೆ.  ಕಳೆದ ವಾರ ಜಗತ್ತಿನಾದ್ಯಂತ 1.8 ಕೋಟಿಗೂ ಅಧಿಕ ಹೊಸ ಪ್ರಕರಣಗಳು (Covid19 Cases) ಪತ್ತೆಯಾಗಿವೆ. ಇದರಿಂದಾಗಿ ಸೋಂಕಿನ ಪ್ರಮಾಣ ಶೇ.20 ರಷ್ಟು ವೃದ್ಧಿಯಾಗಿದೆ. ಆದರೆ ಅದರ ಹಿಂದಿನ ವಾರ ಶೇ.50ರಷ್ಟು ಪ್ರಕರಣ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಪ್ರಕರಣಗಳ ಏರುಗತಿ ಪ್ರಮಾಣ 30 ಪ್ರತಿಶತ ತಗ್ಗಿದಂತಾಗಿದೆ. ಇದು ಒಮಿಕ್ರೋನ್‌ (Omicron) ರೂಪಾಂತರಿ ವೈರಸ್‌ನಿಂದ ಉಲ್ಬಣವಾಗಿದ್ದ ಸೋಂಕು ಪ್ರಮಾಣವು ಇಳಿಕೆ ಆಗುತ್ತಿರುವ ಸಂಕೇತ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

5 States Elections: ಮೋದಿ-ಯೋಗಿಗೆ ಉತ್ತರ ಪ್ರದೇಶ ಗೆಲುವು ಅದೆಷ್ಟು ಮುಖ್ಯ.?

ಸಾಂಕ್ರಾಮಿಕ ಕುರಿತ ವಾರದ ವರದಿಯಲ್ಲಿ, ಆಫ್ರಿಕಾ ಹೊರತಾಗಿ ಕಳೆದ ವಾರ ಎಲ್ಲಾ ದೇಶಗಳಲ್ಲಿ ಸೋಂಕು ಕಳೆದ ವಾರ ಏರಿದೆ. ಆಫ್ರಿಕಾದಲ್ಲಿ ಶೇ.33ರಷ್ಟುಇಳಿಕೆ ಕಂಡುಬಂದಿದೆ. ಅದರ ಹಿಂದಿನ ವಾರದಲ್ಲಿ ವಿಶ್ವದಲ್ಲಿ ಶೇ.50 ರಷ್ಟು ಸೋಂಕಿನ ಪ್ರಮಾಣ ಹೆಚ್ಚಾಗಿತ್ತು. ಇದು ದಾಖಲೆ ಕೂಡ ಆಗಿತ್ತು. ಆದರೆ ಕಳೆದ ವಾರ ಶೇ.20ರಷ್ಟು  ಮಾತ್ರ ಏರಿದೆ ಎಂದು ಡಬ್ಲ್ಯುಎಚ್‌ಒ ವರದಿ ಹೇಳಿದೆ. 

ಕಳೆದ ಎರಡು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ಸಾಂಕ್ರಾಮಿಕವು 2022 ರ ವೇಳೆಗೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು WHO ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. 100 ಕ್ಕೂ ಹೆಚ್ಚು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಕೊರೊನಾ ವೈರಸ್‌ನ ಭವಿಷ್ಯದ ಬಗ್ಗೆ ಪ್ರಮುಖ ಮುನ್ಸೂಚನೆಗಳನ್ನು ನೀಡಿ, ವರದಿಯೊಂದನ್ನು ತಯಾರಿಸಿದ್ದಾರೆ. 

Video Top Stories