Asianet Suvarna News Asianet Suvarna News

ಅಬ್ಬಬ್ಬೋ..! ವಿಶ್ವದಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ, 5 ಲಕ್ಷ ಸಾವು..!

2019 ರ ನವೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡು, ಕೆಲವೇ ತಿಂಗಳಲ್ಲಿ ವಿಶವ್ಯಾಪಿಯಾಗಿದ್ದ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ಇದೀಗ ಅಂಕಿಸಂಖ್ಯೆಯ ಮೈಲುಗಲ್ಲಾದ 1 ಕೋಟಿಯ ಗಡಿದಾಟಿದೆ. ಜೊತೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ ಕೂಡಾ ಶನಿವಾರ 5 ಲಕ್ಷ ಗಡಿ ದಾಟಿದೆ. ಇನ್ನು ಈವರೆಗೆ ಸೋಂಕಿತರ ಪೈಕಿ 54 ಲಕ್ಷಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.

ನವದೆಹಲಿ (ಜೂ. 28): 2019 ರ ನವೆಂಬರ್‌ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡು, ಕೆಲವೇ ತಿಂಗಳಲ್ಲಿ ವಿಶವ್ಯಾಪಿಯಾಗಿದ್ದ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ಇದೀಗ ಅಂಕಿಸಂಖ್ಯೆಯ ಮೈಲುಗಲ್ಲಾದ 1 ಕೋಟಿಯ ಗಡಿದಾಟಿದೆ. ಜೊತೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ ಕೂಡಾ ಶನಿವಾರ 5 ಲಕ್ಷ ಗಡಿ ದಾಟಿದೆ. ಇನ್ನು ಈವರೆಗೆ ಸೋಂಕಿತರ ಪೈಕಿ 54 ಲಕ್ಷಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.

'ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ, ಕೊರೋನಾಕ್ಕೆ ಶರಣಾದ ಮೋದಿ'

ಇತರೆ ದೇಶಗಳಿಗೆ ಹೋಲಿಸಿದರೆ ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಇನ್ನೂ ಕೊರೋನಾ ಭಾರೀ ಹಾವಳಿ ನಡೆಸುತ್ತಿದ್ದು, ನಿತ್ಯ 45000ಕ್ಕೂ ಹೆಚ್ಚು ಹೊಸ ಪ್ರಕರಣ ಬೆಳಕಿಗೆ ಬರುತ್ತಿದೆ. ಶುಕ್ರವಾರ ಒಂದೇ ದಿನ ವಿಶ್ವದಾದ್ಯಂತ ಅಂದಾಜು 2 ಲಕ್ಷ ಹೊಸ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಗ್ರಾಫ್‌ ಮೂಲಕ ಒಂದು ವರದಿ ಇಲ್ಲಿದೆ ನೋಡಿ..!

Video Top Stories