Asianet Suvarna News Asianet Suvarna News

ಕೆಂಪು ರಾಷ್ಟ್ರದ ಕುಬೇರ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಕಣ್ಮರೆ, ಹಿಂದಿದೆಯಾ ಸರ್ಕಾರದ ಕೈವಾಡ?

ಜಗತ್ತಿನ ಅತ್ಯಂತ ಶ್ರೀಮಂತ (3.13 ಲಕ್ಷ ಕೋಟಿ ರು.) ಉದ್ಯಮಿಗಳಲ್ಲಿ ಒಬ್ಬರಾಗಿರುವ ಚೀನಾದ ಅಲಿಬಾಬಾ ಸಮೂಹದ ಸಂಸ್ಥಾಪಕ ಜಾಕ್‌ ಮಾ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ.
 

ಬೀಜಿಂಗ್ (ಜ. 06):  ಜಗತ್ತಿನ ಅತ್ಯಂತ ಶ್ರೀಮಂತ (3.13 ಲಕ್ಷ ಕೋಟಿ ರು.) ಉದ್ಯಮಿಗಳಲ್ಲಿ ಒಬ್ಬರಾಗಿರುವ ಚೀನಾದ ಅಲಿಬಾಬಾ ಸಮೂಹದ ಸಂಸ್ಥಾಪಕ ಜಾಕ್‌ ಮಾ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ.

ಚೀನಾ ಸರ್ಕಾರದ ಬಗ್ಗೆ ಧೈರ್ಯವಾಗಿ ಮಾತನಾಡುವ ಚೀನಾದ ಏಕೈಕ ಉದ್ಯಮಿಯೆಂದು ಜಾಕ್ ಮಾ ಹೆಸರು ಪಡೆದಿದ್ದರು.  ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಶಾಂಘೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಚೀನಾ ಸರ್ಕಾರದ ಆರ್ಥಿಕ ನೀತಿಗಳು ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ನಿಯಮಗಳನ್ನು ಕಟುವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕಾರವಾಗಿ ಚೀನಾ ಸರ್ಕಾರ ಅಲಿಬಾಬಾ ಸಮೂಹ ಹಾಗೂ ಆ್ಯಂಟ್‌ ಗ್ರೂಪ್‌ ಕಂಪನಿಗಳ ವಿರುದ್ಧ ನಾನಾ ಆರೋಪಗಳನ್ನು ಹೊರಿಸಿ ತನಿಖೆ ಆರಂಭಿಸಿತ್ತು. ಆಗಿನಿಂದಲೇ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮೆರಿಕಾ ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲ, ಆರೋಗ್ಯ ಗಂಭೀರವಾಗಿದ್ದರೆ ಆಸ್ಪತ್ರೆಗೆ ಬೇಡ್ವಂತೆ!