ಪ್ಯಾಂಗಾಂಗ್ ಸರೋವರದ ಬಳಿ ಒಳನುಸುಳಲು ಚೀನಾ ಯತ್ನ; ಭಾರತದಿಂದ ತಿರುಗೇಟು
ಪೂರ್ವ ಲಡಾಖ್‌ನಿಂದ ಭಾರತ ಹಾಗೂ ಚೀನಾ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಇನ್ನೂ ಪ್ರಯತ್ನ ನಡೆಸುತ್ತಿರುವುದರ ನಡುವೆಯೇ ಚೀನಾ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದ್ದು, ಭಾರತದ ಪ್ರದೇಶದೊಳಗೆ ನುಸುಳಲು ವಿಫಲ ಯತ್ನ ನಡೆಸಿದೆ.
ನವದೆಹಲಿ (ಸೆ. 01): ಪೂರ್ವ ಲಡಾಖ್‌ನಿಂದ ಭಾರತ ಹಾಗೂ ಚೀನಾ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಇನ್ನೂ ಪ್ರಯತ್ನ ನಡೆಸುತ್ತಿರುವುದರ ನಡುವೆಯೇ ಚೀನಾ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದ್ದು, ಭಾರತದ ಪ್ರದೇಶದೊಳಗೆ ನುಸುಳಲು ವಿಫಲ ಯತ್ನ ನಡೆಸಿದೆ.
ಆ.29 ರ ಮಧ್ಯರಾತ್ರಿ ಚೀನಾದ ಸೇನೆ ತನ್ನ ಯೋಧರನ್ನು ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ದಕ್ಷಿಣದ ದಂಡೆಯ ಮೇಲೆ ಭಾರತದೊಳಗೆ ಒಳನುಗ್ಗಿಸಲು ಯತ್ನಿಸಿದೆ. ತನ್ಮೂಲಕ ಎಲ್‌ಎಸಿಯ ಗುಂಟ ಇರುವ ಹಾಲಿ ಸ್ಥಿತಿಯನ್ನೇ ಬದಲಿಸಲು ಏಕಪಕ್ಷೀಯವಾಗಿ ಮುಂದಾಗಿದೆ. ಪ್ಯಾಂಗಾಂಗ್ ಸರೋವರದ ದಕ್ಷಿಣ ದಂಡೆಯನ್ನು ಅತಿಕ್ರಮಿಸಿಕೊಳ್ಳಲು ಚೀನಾದ ಯೋಧರು ‘ದೊಡ್ಡ ಸಂಖ್ಯೆ’ಯಲ್ಲೇ ಒಳನುಸುಳಲು ಯತ್ನಿಸಿದ್ದಾರೆ.
ಚೀನಾದ ಈ ಪ್ರಚೋದನಕಾರಿ ಚಟುವಟಿಕೆಯ ಬಗ್ಗೆ ಮೊದಲೇ ಅರಿತಿದ್ದ ಭಾರತದ ಸೇನೆ ತಕ್ಷಣ ಯೋಧರನ್ನು ಕಳುಹಿಸಿ ತಿರುಗೇಟು ನೀಡಿದೆ. ಈ ವೇಳೆ, ಉಭಯ ದೇಶಗಳ ಯೋಧರ ನಡುವೆ ದೈಹಿಕ ಸಂಘರ್ಷ ಏರ್ಪಟ್ಟಿಲ್ಲ. ಸದ್ಯ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಎರಡೂ ದೇಶಗಳ ನಡುವೆ ತಿಕ್ಕಾಟ ಮುಂದುವರಿದಿದೆ. ಆದರೆ ಇದೇ ಮೊದಲ ಬಾರಿಗೆ ದಕ್ಷಿಣ ದಂಡೆಯಲ್ಲಿ ಚೀನಾ ಕ್ಯಾತೆ ತೆಗೆದಿದೆ.
ಇಸ್ರೇಲ್ ನಿರ್ಮಿತ ಫಾಲ್ಕನ್ ಖರೀದಿಗೆ ಭಾರತ ಒಪ್ಪಂದ: ಚೀನಾ, ಪಾಕ್‌ಗೆ ಶುರುವಾಯ್ತು ನಡುಕ!