ಜಗತ್ತಿನೆಲ್ಲೆಡೆ ಬೃಹತ್ ಸಂಸ್ಥೆಗಳಲ್ಲಿದ್ದಾರೆ ಚೀನಾ ಗೂಢಾಚಾರಿಗಳು, ಮಾಹಿತಿ ಕದಿತಾರೆ ಎಚ್ಚರ!
ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ)ದ ಸುಮಾರು 20 ಲಕ್ಷ ಸದಸ್ಯರು ರಹಸ್ಯವಾಗಿ ಜಗತ್ತಿನೆಲ್ಲೆಡೆಯ ಬೃಹತ್ ಸಂಸ್ಥೆಗಳಲ್ಲಿ ನೌಕರಿಗೆ ಸೇರಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯೀಗ ಬಹಿರಂಗಗೊಂಡಿದೆ.
ಬೆಂಗಳೂರು (ಡಿ. 16): ಕುತಂತ್ರಿ ಬುದ್ಧಿ ಮಾಡೋದ್ರಲ್ಲಿ ಚೀನಾ ಎತ್ತಿದ ಕೈ. ಏನಾದರೊಂದು ಸಂಚು ರೂಪಿಸಿ ಬೇರೆ ದೇಶದವರನ್ನು ಹಣಿಯಲು ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಈಗ ಬಯಲಾಗಿರುವ ಸಂಗತಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ)ದ ಸುಮಾರು 20 ಲಕ್ಷ ಸದಸ್ಯರು ರಹಸ್ಯವಾಗಿ ಜಗತ್ತಿನೆಲ್ಲೆಡೆಯ ಬೃಹತ್ ಸಂಸ್ಥೆಗಳಲ್ಲಿ ನೌಕರಿಗೆ ಸೇರಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯೀಗ ಬಹಿರಂಗಗೊಂಡಿದೆ.
ಸಾಕು ನಾಯಿ ಪ್ರಗ್ನೆನ್ಸಿ ಫೋಟೋಶೂಟ್; 2 ನೇ ಮಹಡಿಯಿಂದ ಬಿದ್ದರೂ ಕಾಲೂರಿ ಬದುಕಿದ 'ಮಿರಾಕಲ್'
ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸಿಪಿಸಿ ಸದಸ್ಯರು ನೇರವಾಗಿ ಸಿಪಿಸಿಗೆ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೇ ವರದಿ ಮಾಡಿಕೊಳ್ಳುತ್ತಾರೆ ಎಂದು ಆಸ್ಪ್ರೇಲಿಯಾದ ಪತ್ರಿಕೆಯ ವರದಿ ಹೇಳಿದೆ. ಬೇರೆ ದೇಶಗಳಿಂದ ವ್ಯೂಹಾತ್ಮಕ ಮಾಹಿತಿಗಳನ್ನು ಕದಿಯಲು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಇಂತಹದ್ದೊಂದು ಜಾಲವನ್ನು ಹೊಂದಿರಬಹುದು ಎನ್ನಲಾಗಿದೆ.