Asianet Suvarna News Asianet Suvarna News

ದೆಹಲಿ ಜೈಲಿನಲ್ಲಿ 5 ವರ್ಷ ಶಿಕ್ಷೆ ಅನುಭವಿಸಿದ್ದ ಉಗ್ರ ಅಫ್ಘನ್‌ನಲ್ಲಿ ಸೂಸೈಡ್ ಬಾಂಬರ್..!

ಕಾಬೂಲ್‌ನಲ್ಲಿ ನಡೆದ ಭೀಭತ್ಸ ಸರಣಿ ಬಾಂಬ್‌ನ ಸದ್ದು ಇನ್ನೂ ಹಾಗೆ ಗುಂಯ್ ಗುಡುತ್ತಿದೆ. ಆಗಲೇ ಜಲಾಲಾಬಾದ್‌ನಲ್ಲಿ ಮತ್ತೊಂದು ಬಾಂಬ್ ಬ್ಲಾಸ್ಟ್ ಆಗಿದೆ. ಆದರೆ ಸಾವು ನೋವು ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲದಿರುವುದು ಸಮಾಧಾನಕರ ವಿಚಾರ.

Sep 22, 2021, 2:58 PM IST

ಕಾಬೂಲ್‌ನಲ್ಲಿ ನಡೆದ ಭೀಭತ್ಸ ಸರಣಿ ಬಾಂಬ್‌ನ ಸದ್ದು ಇನ್ನೂ ಹಾಗೆ ಗುಂಯ್ ಗುಡುತ್ತಿದೆ. ಆಗಲೇ ಜಲಾಲಾಬಾದ್‌ನಲ್ಲಿ ಮತ್ತೊಂದು ಬಾಂಬ್ ಬ್ಲಾಸ್ಟ್ ಆಗಿದೆ. ಆದರೆ ಸಾವು ನೋವು ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲದಿರುವುದು ಸಮಾಧಾನಕರ ವಿಚಾರ. ಆದರೆ ಜನ ಮಾತ್ರ ಭಯದಲ್ಲೇ ಬದುಕುತ್ತಿದ್ದಾರೆ.

ಕಾಬೂಲ್ ಬಾಂಬ್ ದಾಳಿಯ ಹಿಂದೆ ಇದ್ದಿದ್ದು ನಾನೇ ಎಂದು ಮುಂದೆ ಬಂದಿದ್ದ ಐಸಿಸ್ ಕೆ ಉಗ್ರ ಈ ಬಾರಿಯ ಬ್ಲಾಸ್ಟ್‌ ಹಿಂದೆಯೂ ಇರಬಹುದಾ ಎಂಬ ಅನುಮಾನವಿದೆ. ಈತ ದೆಹಲಿಯ ಜೈಲಿನಲ್ಲಿ 5 ವರ್ಷ ಕಠಿಣ ಶಿಕ್ಷೆ ಅನುಭವಿಸಿದ್ದ. ಜಲಾಲಾಬಾದ್ ದಾಳಿಯ ಹಿಂದೆ ಈತನ ಕೈವಾಡ ಇದೆಯಾ.?