ತನ್ನ ಬೈಕ್ ಅಪಘಾತವಾದ್ರೂ ಡ್ಯಾನ್ಸ್ ಮಾಡಿದ ವಿಚಿತ್ರ ಬೈಕ್‌ ಸವಾರ!

ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಭಾರತದಲ್ಲಿ ಪ್ರತಿದಿನವೂ 1214 ಅಪಘಾತಗಳು ನಡೆಯುತ್ತವೆ ಎಂದು ಅಂಕಿ ಅಂಶಗಳು ಸೂಚಿಸುತ್ತವೆ. ಆದರಲ್ಲಿ ಶೇಕಡಾ 25 ರಷ್ಟು ದ್ವಿಚಕ್ರವಾಹನ ಸವಾರರು ಅಪಘಾತದಿಂದ ಸಾವಿಗೀಡಾಗುತ್ತಾರೆ

First Published Jul 6, 2022, 11:53 AM IST | Last Updated Jul 6, 2022, 11:53 AM IST

ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ನಡೆಯುತ್ತಲೇ ಇರುತ್ತವೆ. ಭಾರತದಲ್ಲಿ ಪ್ರತಿದಿನವೂ 1214 ಅಪಘಾತಗಳು ನಡೆಯುತ್ತವೆ ಎಂದು ಅಂಕಿ ಅಂಶಗಳು ಸೂಚಿಸುತ್ತವೆ. ಆದರಲ್ಲಿ ಶೇಕಡಾ 25 ರಷ್ಟು ದ್ವಿಚಕ್ರವಾಹನ ಸವಾರರು ಅಪಘಾತದಿಂದ ಸಾವಿಗೀಡಾಗುತ್ತಾರೆ. ಹಲವು ಸಂಚಾರ ಸುರಕ್ಷತೆಗಳ ಹೊರತಾಗಿಯೂ ಅಪಘಾತಗಳ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಹಲವು ಅಪಘಾತದ ಭೀಕರ ದೃಶ್ಯಗಳನ್ನು ನಾವು ನೋಡಿದ್ದೇವೆ. ಅದೇ ರೀತಿಯ ಅಪಘಾತದ ವಿಡಿಯೋ ಇದಾಗಿದೆ. ಇದರಲ್ಲಿ ಬೈಕ್ ಸವಾರ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಬೈಕ್ ಸವಾರನೋರ್ವ ಸಿಗ್ನಲ್ ಜಂಪ್ ಮಾಡಲು ಹೋದ ಪರಿಣಾಮ ಕಾರು ಡಿಕ್ಕಿಯಾಗಿ ಬೈಕ್‌ನಿಂದ ಬಿದ್ದಿದ್ದಾನೆ. ಆದರೆ ಈತನಿಗೆ ಅಪಘಾತದಿಂದ ಸ್ವಲವೂ ಹಾನಿಯಾಗಿಲ್ಲ. ಆದರೆ ಈತನ ಬೈಕ್ ಸಂಪೂರ್ಣ ಜಖಂ ಆಗಿದೆ. ಇನ್ನೂ ವಿಚಿತ್ರ ಎಂದರೆ ಬೈಕ್‌ನಿಂದ ಕೆಳಗೆ ಬಿದ್ದ ಈತ ಕ್ಷಣದಲ್ಲೇ ಮೇಲೆದ್ದು ಡಾನ್ಸ್ ಮಾಡಿದ್ದಾನೆ. ಇದರ ದೃಶ್ಯವೀಗ ಕ್ಯಾಮರಾದಲ್ಲಿ ಸೆರೆ ಆಗಿದೆ.