ಚಲಿಸುತ್ತಿದ್ದ ಟ್ರಕ್‌ನಿಂದ ಕೆಳಗೆ ಬಿತ್ತು 2000ಕ್ಕೂ ಅಧಿಕ ಬಿಯರ್‌ ಬಾಟಲ್‌: ಕುಡುಕರು ಫುಲ್‌ ಥ್ರಿಲ್!

ಬಿಯರ್ ಬಾಟಲ್‌ ಸಾಗಿಸುತ್ತಿದ್ದ ಟ್ರಕ್‌ನಿಂದ ಎರಡು ಸಾವಿರಕ್ಕೂ ಹೆಚ್ಚು ಬಿಯರ್ ಬಾಟಲ್‌ಗಳು ಕೆಳಗೆ ಬಿದ್ದ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದು ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

First Published Jul 17, 2022, 9:21 PM IST | Last Updated Jul 17, 2022, 9:21 PM IST

ನಮ್‌ ಜನ ಊಟ ಬೇಕಾದ್ರು ಬಿಡ್ತಾರೆ ಅದ್ರೆ ಎಣ್ಣೆ ಬಿಡಲ್ಲ. ಕಿಕ್ಕೇರಿಸುವ ಎಣ್ಣೆಯ ಮೇಲೆ ನಮ್ಮ ಭಾರತೀಯರ ಮೋಹ ಅಂತಹದ್ದು, ಅನ್ನ ಚೆಲ್ಲಿದರು ಸುಮ್ಮನಿರಬಹುದು ಆದರೆ ಎಣ್ಣೆ ಚೆಲಿದರೆ ಕೊಲೆಯೇ ನಡೆದು ಬಿಡಬಹುದೇನೋ ಎಣ್ಣೆ ಎಂದರೆ ಆ ರೀತಿ ಪ್ರಾಣ ಬಿಡೋ ಜನ ಇದ್ದಾರೆ, ಹೀಗಿರುವಾಗ ಎಣ್ಣೆ ಸಾಗಿಸುತ್ತಿದ್ದ ಲಾರಿಯೊಂದರಿಂದ ಸುಮಾರು 200 ಬಿಯರ್‌ ಬಾಟಲ್‌ ಕೆಳಗೆ ಬಿದ್ದಿದ್ದು ಹಾಲಿನಂತೆ ರಸ್ತೆಯಲ್ಲಿ ಬೆಳ್ಳನೆಯ ನೊರೆ ಬರಿಸಿದೆ. ಇದನ್ನು ನೋಡಿದ ಎಣ್ಣಿಪ್ರಿಯರು ಹೃದಯ ಒಡೆದುಕೊಂಡಿದ್ದಾರೆ. ಛೇ ನಮಗಾದರೂ ಸಿಕ್ಕಿದ್ದರೆ ಎಂದು ಬಾಯಿ ಬಿಟ್ಟಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದ್ದು ಎಣ್ಣೆ ಸಾಗಿಸುತ್ತಿದ್ದಾಗ ಅದರಲ್ಲಿ ಬಿಯರ್ ಬಾಟಲ್‌ಗಳು ಅಚಾನಕ್ ಆಗಿ ರಸ್ತೆಗೆ ಚೆಲ್ಲಿವೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.