ಬಾಂಗ್ಲಾದೇಶ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ 7 ಲಕ್ಷ ಮಂದಿ ಪ್ರತಿಭಟನೆ!

ಬಾಂಗ್ಲಾದೇಶದಲ್ಲಿನ ರಾಜಕೀಯ ಕ್ಷಿಪ್ರ ಬೆಳವಣಿಗೆಯಿಂದ ಅಲ್ಲಿನ ಹಿಂದೂಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದೂಗಳ ಮೇಲೆ ಸಿಕ್ಕ ಸಿಕ್ಕಲ್ಲಿ ದಾಳಿ ನಡೆಯುತ್ತಿದೆ. ದೇವಾಲಯಗಳು ಧ್ವಂಸಗೊಳಿಸಲಾಗಿದೆ. ಇದನ್ನು ಖಂಡಿಸಿ ಬರೋಬ್ಬರಿ 7 ಲಕ್ಷ ಮಂದಿ ಪ್ರತಿಭಟನೆ ಮೂಲಕ ರಸ್ತೆಗಿಳಿದಿದ್ದಾರೆ.

First Published Aug 12, 2024, 11:32 AM IST | Last Updated Aug 12, 2024, 11:32 AM IST

ಢಾಕಾ(ಆ.12) ಬಾಂಗ್ಲಾದೇಶದಲ್ಲಿನ ಹಿಂಸಾಚಾರಕ್ಕೆ ದೇಶವೇ ಧಗಧಗಿಸುತ್ತಿದೆ. ಬಾಂಗ್ಲಾದ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಹಿಂದೂಗಳ ಮನೆಗೆ ನುಗ್ಗಿ ದಾಳಿ ಮಾಡಲಾಗುತ್ತಿದೆ. ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಈ ದಾಳಿ, ದೌರ್ಜನ್ಯ ಖಂಡಿಸಿ 7 ಲಕ್ಷಕ್ಕೂ ಅಧಿಕ ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಢಾಕಾ, ಚಿತ್ತಗಾಂಗ್‌ನಲ್ಲ ಭಾರಿ ಪ್ರಮಾಣದಲ್ಲಿ ಜನರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಕ್ರೌರ್ಯದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತಿಭಟನೆ ನಡೆಯುತ್ತಿದೆ.
 

Video Top Stories