Asianet Suvarna News Asianet Suvarna News

ಜಗತ್ತಿನ ಸರ್ವಶಕ್ತ ದೇಶಕ್ಕೆ ಇದೆಂತಹಾ ಅವಮಾನ?

ಅಮೆರಿಕ ಸೈನಿಕರನ್ನು ಮುಟ್ಟಿದ್ರೆ ಜೋಕೆ, ಜೋ ಬೈಡೆನ್ ಎಚ್ಚರಿಕೆ ಬೆನ್ನಲ್ಲೇ ಕಾಬೂಲ್‌ನಲ್ಲಿ ಅತ್ಯುಗ್ರ ಬಾಂಬ್ ದಾಳಿ . ತಾಲೀಬಾನ್ ಐಸಿಸ್ ನರಕಾಸುರರಿಗಿಲ್ಲ ದೊಡ್ಡಣ್ಣನ ಭಯ. ಜಗತ್ತಿನ ಸರ್ವಶಕ್ತ ದೇಶಕ್ಕೆ ಇದೆಂತಹಾ ಅವಮಾನ. 

ವಾಷಿಂಗ್ಟನ್(ಆ.28) ಅಮೆರಿಕ ಸೈನಿಕರನ್ನು ಮುಟ್ಟಿದ್ರೆ ಜೋಕೆ, ಜೋ ಬೈಡೆನ್ ಎಚ್ಚರಿಕೆ ಬೆನ್ನಲ್ಲೇ ಕಾಬೂಲ್‌ನಲ್ಲಿ ಅತ್ಯುಗ್ರ ಬಾಂಬ್ ದಾಳಿ . ತಾಲೀಬಾನ್ ಐಸಿಸ್ ನರಕಾಸುರರಿಗಿಲ್ಲ ದೊಡ್ಡಣ್ಣನ ಭಯ. ಜಗತ್ತಿನ ಸರ್ವಶಕ್ತ ದೇಶಕ್ಕೆ ಇದೆಂತಹಾ ಅವಮಾನ. 

ಶಕ್ತಿ, ಸಾಮರ್ಥ್ಯ, ತಾಕತ್ತು, ಹಣ ಬಲ, ಸೇನಾ ಬಲ, ಬಾಹುಬಲ ಹೀಗೆ ಅಷ್ಟೂ ಬಲಗಳಲ್ಲಿ ಅಮೆರಿಕವನ್ನು ಮೀರಿಸಿದ ದೇಶ ಮತ್ತೊಂದಿಲ್ಲ. ಜಗತ್ತಿನ ಉಳಿದೆಲ್ಲಾ  ರಾಷ್ಟ್ರಗಳದ್ದು ಒಂದು ತೂಕವಾದರೆ ಅಮೆರಿಕದ್ದು ಮತ್ತೊಂದೇ ತೂಕ. ಅಮೆರಿಕಾ ಅಧ್ಯಕ್ಷರು ಶ್ವೇತ ಭವನದಲ್ಲಿ ನಿಂತು ಗುಡುಗಿದರೆ ಇಡೀ ಜಗತ್ತೇ ನಡುಗುತ್ತೆ ಹೀಗಿರುವಾಗ ತಾಲಿಬಾನ್ ಈಗ ದೊಡ್ಡಣ್ಣನಿಗೇ ಸವಾಲು ಹಾಕಿದೆ.