Asianet Suvarna News Asianet Suvarna News

ಸಿಧುಗೆ ಪಾಕಿಸ್ತಾನ ನಂಟಿದೆ, ಅವರೊಬ್ಬ 'ದೇಶದ್ರೋಹಿ': ಅಮರೀಂದರ್ ಸಿಂಗ್ ಆರೋಪ

ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮ​ರೀಂದರ್‌ ಸಿಂಗ್‌ ಕಳೆದರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಪಾಲಿಗಿದ್ದ ಅತಿದೊಡ್ಡ ಭರವಸೆ ಎನಿಸಿಕೊಂಡವರು ಅಮ​ರೀಂದರ್‌ ಸಿಂಗ್‌. 

Sep 20, 2021, 11:14 AM IST

ನವದೆಹಲಿ (ಸೆ. 20): ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮ​ರೀಂದರ್‌ ಸಿಂಗ್‌ ಕಳೆದರಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಪಾಲಿಗಿದ್ದ ಅತಿದೊಡ್ಡ ಭರವಸೆ ಎನಿಸಿಕೊಂಡವರು ಅಮ​ರೀಂದರ್‌ ಸಿಂಗ್‌. ಇವರ ರಾಜೀನಾಮೆ ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಅಮರೀಂದರ್ ಮೇಲಿನ ಗೌರವಕ್ಕಿಂತ ಸಿಧು ಮೇಲಿನ ಪ್ರೀತಿಯೇ ಜಾಸ್ತಿ. ಇದನ್ನೇ ಬಂಡವಾಳ ಮಾಡಿಕೊಂಡ ಸಿಧು, ಅಮರೀಂದರ್ ಸ್ಥಾನಕ್ಕೆ ಕುತ್ತು ತಂದಿದ್ದಾರೆ ಎನ್ನಲಾಗುತ್ತಿದೆ. 

ಚುನಾವಣೆಗೆ ಮುನ್ನ ಪಂಜಾಬ್ ಸಿಎಂ ರಾಜೀನಾಮೆ: ಕ್ಯಾಪ್ಟನ್ ಇಲ್ಲದೇ ಬಡವಾಯ್ತಾ ಕಾಂಗ್ರೆಸ್.?

ಇನ್ನೊಂದು ಕಡೆ ಸಿಧು ಮೇಲೆ ಅಮರೀಂದರ್ 'ದೇಶದ್ರೋಹಿ' ಎನ್ನುವ ಆರೋಪ ಮಾಡಿದ್ದಾರೆ.  ಸಿಧು ಪಾಕ್‌ ಪ್ರಧಾ​ನಿ ಇಮ್ರಾನ್‌ ಖಾನ್‌ ಹಾಗೂ ಪಾಕ್‌ ಸೇನಾ ಮುಖ್ಯಸ್ಥ ಬಜ್ವಾರನ್ನು ಅಪ್ಪಿ​ಕೊ​ಳ್ಳು​ತ್ತಾರೆ. ಅವರು ದೇಶ​ದ್ರೋ​ಹಿ. ದೇಶದ ಭದ್ರತಾ ಹಿತ​ದೃ​ಷ್ಟಿ​ಯಿಂದ ಸಿಧು ಸಿಎಂ ಆಗು​ವು​ದನ್ನು ವಿರೋ​ಧಿ​ಸುವೆ. ಅವರು ಮುಖ್ಯ​ಮಂತ್ರಿ ಆದರೆ ದೊಡ್ಡ ದುರಂತ. ದೇಶದ ಭದ್ರ​ತೆಗೆ ಅವ​ರಿಂದ ಬೆದ​ರಿಕೆ ಇದೆ ಎಂದಿದ್ದಾರೆ.