ಕೊರೊನಾ ಬಳಿಕ ಚೀನಾದಲ್ಲಿ ಹೊಸ ಬ್ಯಾಕ್ಟೀರಿಯಾ; ಸೋಂಕು ತಗುಲಿದ್ರೆ ಮಕ್ಕಳಾಗದಿರುವ ಸಾಧ್ಯತೆ!

ಮಾರಕ ರೋಗಗಳ ತವರೂರಾಗುತ್ತಿದೆ ಚೀನಾ. ಹೊಸ ಹೊಸ ರೋಗಗಳನ್ನು ಉತ್ಪಾದಿಸುತ್ತಿದೆ. ಕೊರೊನಾ ಆಯ್ತು ಈಗ ಚೀನಾದಲ್ಲಿ ಇನ್ನೊಂದು ರೀತಿಯ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಬ್ರುಸೆಲ್ಲೋಸಿಸ್ ಎಂಬ ಬ್ಯಾಕ್ಟೀರಿಯಾಕ್ಕೆ ಸಾಕಷ್ಟು ಜನ ತುತ್ತಾಗಿದ್ದಾರೆ. 

First Published Sep 20, 2020, 5:08 PM IST | Last Updated Sep 20, 2020, 5:08 PM IST

ಬೆಂಗಳೂರು (ಸೆ. 20): ಮಾರಕ ರೋಗಗಳ ತವರೂರಾಗುತ್ತಿದೆ ಚೀನಾ. ಹೊಸ ಹೊಸ ರೋಗಗಳನ್ನು ಉತ್ಪಾದಿಸುತ್ತಿದೆ. ಕೊರೊನಾ ಆಯ್ತು ಈಗ ಚೀನಾದಲ್ಲಿ ಇನ್ನೊಂದು ರೀತಿಯ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಬ್ರುಸೆಲ್ಲೋಸಿಸ್ ಎಂಬ ಬ್ಯಾಕ್ಟೀರಿಯಾಕ್ಕೆ ಸಾಕಷ್ಟು ಜನ ತುತ್ತಾಗಿದ್ದಾರೆ. 

ಚೀನಾದಲ್ಲಿ ಹೊಸ ಬ್ಯಾಕ್ಟೀರಿಯಾ: ಸೋಂಕು ತಗುಲಿದ್ರೆ ಪುರುಷತ್ವವೇ ಹೋಗುತ್ತೆ

ಜೈವಿಕ ಔಷಧ ಪ್ರಯೋಗಾಲಯದಲ್ಲಿ ಕಳೆದ ವರ್ಷ ಉಂಟಾದ ಸೋರಿಕೆಯಿಂದ ಬ್ಯಾಕ್ಟೀರಿಯಾ ಹುಟ್ಟಿಕೊಂಡಿದೆ ಎಂದು ಚೀನಾ ಹೇಳುತ್ತಿದೆ. ಈಗಾಗಲೇ 3245 ಜನರಿಗೆ ಈ ರೋಗ ಬಂದಿದೆ. ಇದು ಬಂದರೆ ತಲೆನೋವು, ಸ್ನಾಯು ಸೆಳೆತ, ಜ್ವರ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಬ್ರುಸೆಲ್ಲೋಸಿಸ್ ಹೇಗೆ ಬರುತ್ತದೆ? ಇದನ್ನು ವಾಸಿ ಮಾಡಲು ಸಾಧ್ಯವೇ ಇಲ್ವಾ? ಇವೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!