Asianet Suvarna News Asianet Suvarna News

ಫೆಸಿಫಿಕ್ ಸಾಗರದಲ್ಲಿ ಸುನಾಮಿ ಭಯ, ಫಿಜಿ, ನ್ಯೂಜಿಲೆಂಡ್‌, ವನೌತುನಲ್ಲಿ ಮುನ್ನೆಚ್ಚರಿಕೆ

ಉತ್ತರ ನ್ಯೂಜಿಲೆಂಡ್‌ ಸನಿಹದ ದಕ್ಷಿಣ ಪೆಸಿಫಿಕ್‌ ಸಾಗರದಲ್ಲಿ ತಳದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ ಸುನಾಮಿ ಕೂಡ ಎದ್ದಿದ್ದು, ನ್ಯೂಜಿಲೆಂಡ್‌, ವನೌತು ಹಾಗೂ ಆಸ್ಪ್ರೇಲಿಯಾ ಕರಾವಳಿ ತೀರದಲ್ಲಿ ಕಟ್ಟೆಚ್ಚರ ಸಾರಲಾಗಿದೆ.

ನವದೆಹಲಿ (ಫೆ. 12): ಉತ್ತರ ನ್ಯೂಜಿಲೆಂಡ್‌ ಸನಿಹದ ದಕ್ಷಿಣ ಪೆಸಿಫಿಕ್‌ ಸಾಗರದಲ್ಲಿ ತಳದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ ಸುನಾಮಿ ಕೂಡ ಎದ್ದಿದ್ದು, ನ್ಯೂಜಿಲೆಂಡ್‌, ವನೌತು ಹಾಗೂ ಆಸ್ಪ್ರೇಲಿಯಾ ಕರಾವಳಿ ತೀರದಲ್ಲಿ ಕಟ್ಟೆಚ್ಚರ ಸಾರಲಾಗಿದೆ.

ಮೋದಿ - ಬೈಡೆನ್ ಸಂಬಾಷಣೆ ನೋಡಿ ಪಾಕ್‌ಗೆ ಪುಕಪುಕ, ಚೀನಾಗೆ ಹೈಪರ್ ಟೆನ್ಷನ್.!

ಫಿಜಿ ತೀರಕ್ಕೆ 0.3 ಮೀ. ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ. ಬಳಿಕ 0.3 ಮೀಟರ್‌ನಿಂದ 1 ಮೀಟರ್‌ ಎತ್ತರದ ಸುನಾಮಿ ಅಲೆಗಳು ದಕ್ಷಿಣ ಪೆಸಿಫಿಕ್‌ನಲ್ಲಿ ಎದ್ದಿವೆ. ಇವು ಫಿಜಿ, ನ್ಯೂಜಿಲೆಂಡ್‌ ಹಾಗೂ ವನೌತು ತಲುಪುವ ಸಾಧ್ಯತೆ ಇದೆ ಎಂದು ಅಮೆರಿಕ ಸರ್ಕಾರದ ಪೆಸಿಫಿಕ್‌ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಕೆ ನೀಡಿದೆ. ಆಸ್ಪ್ರೇಲಿಯಾದಲ್ಲಿ ಕೂಡ ಸುನಾಮಿ ಮುನ್ನೆಚ್ಚರಿಕೆ ವಹಿಸಲಾಗಿದೆ.