Asianet Suvarna News Asianet Suvarna News

ಕೊರೋನಾ ಆರ್ಭಟ: ವಿಶ್ವಾದ್ಯಂತ 1 ಕೋಟಿ ಪಾಸಿಟಿವ್‌

ವಿಶ್ವಾದ್ಯಂತ ಕೊರೋನಾ ವೈರಸ್‌ ಮರಣ ಮೃದಂಗ| ವಿಶ್ವಾದ್ಯಂತ 1 ಕೋಟಿ ಪಾಸಿಟಿವ್‌|ಸಾವಿನ ಸಂಖ್ಯೆ 5 ಲಕ್ಷ ದಾಟಿದೆ| ಭಾರತದಲ್ಲೂ ಕೂಡ ಐದು ಲಕ್ಷ ಮಂದಿ ಕೊರೋನಾ ಪೀಡಿತರು|

ಬೆಂಗಳೂರು(ಜೂ.27): ಮಹಾಮಾರಿ ಕೊರೋನಾ ವೈರಸ್‌ಗೆ ಬ್ರೇಕ್‌ ಬೀಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಡೆಡ್ಲಿ ವೈರಸ್‌ಗೆ ಇಲ್ಲಿಯವರೆಗೆ ಔಷಧ ಸಿಕ್ಕಿಲ್ಲ, ಹೀಗಾಗಿ ವಿಶ್ವಾದ್ಯಂತ ವೈರಸ್‌ ಮರಣ ಮೃದಂಗ ಮುಂದುವರೆಸಿದೆ. ಇದೀಗ ಸೋಂಕಿತರ ಸಂಖ್ಯೆ 1 ಕೋಟಿಯುತ್ತ ಮುನ್ನುಗ್ಗುತ್ತಿದೆ. 

ಪರೀಕ್ಷಾ ಕೇಂದ್ರದ ಪಕ್ಕದಲ್ಲಿರುವ ಗರ್ಭಿಣಿಗೆ ಕೋವಿಡ್ 19; ವಿದ್ಯಾರ್ಥಿಗಳಿಗೆ ಭಯ..ಭಯ..!

ಇನ್ನು ಸಾವಿನ ಸಂಖ್ಯೆ 5 ಲಕ್ಷ ದಾಟಿದೆ. ಇದರಿಂದ ಜಗತ್ತಿನ್ನೆಲ್ಲೆಡೆ ಮಹಾಮಾರಿ ಕೊರೋನಾ ವೈರಸ್‌ ತನ್ನ ಅಟ್ಟಹಾಸ ಮೆರೆಯುತ್ತಿದೆ. ಭಾರತದಲ್ಲೂ ಕೂಡ ಐದು ಲಕ್ಷ ಮಂದಿ ಕೊರೋನಾ ಪೀಡಿತರಾಗಿದ್ದಾರೆ. ಚೀನಾದಿಂದ ವಿಶ್ವದ 196 ರಾಷ್ಟ್ರಗಲಿಗೆ ಹರಡಿಸುವ ಕೊರೋನಾ ಆರ್ಥಿಕತೆ ಮೇಲೆ ಬರ್ಬಾದ್‌ ಮಾಡಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.