Asianet Suvarna News Asianet Suvarna News

ಕೊರೋನಾ ತಪಾಸಣೆಗೆ ರೋಬೋ; ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಮಾತ್ರ ಸಿಕ್ತಾರೆ ಡಾಕ್ಟ್ರು!

  • ಬೆಂಗಳೂರಿನ ಈ ಆಸ್ಪತ್ರೆಯೊಳಗೆ ಹೋಗ್ಬೇಕಾದ್ರೆ ರೋಬೋನನ್ನು ಭೇಟಿಯಾಗ್ಲೇ ಬೇಕು!
  • ಕೊರೋನಾವೈರಸ್‌ ಸೋಂಕಿನ ಲಕ್ಷಣ ಇದೆಯೇ ಅಂತಾ ಚೆಕ್ ಮಾಡುತ್ತೆ ಈ ರೋಬೋ
  • ಯಾರೂ ಕೂಡಾ ನೇರವಾಗಿ ವೈದ್ಯರನ್ನು ಭೇಟಿಯಾಗುವಂತಿಲ್ಲ

ಬೆಂಗಳೂರು (ಏ.30): ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯೊಳಗೆ ಹೋಗ್ಬೇಕಾದ್ರೆ ಮೊದಲು ರೋಬೋನನ್ನು ಭೇಟಿಯಾಗ್ಲೇ ಬೇಕು! ಕೊರೋನಾವೈರಸ್‌ ಸೋಂಕಿನ ಲಕ್ಷಣ ಏನಾದ್ರೂ ಇದೆಯೇ ಎಂದು ಅದು ತಪಾಸಣೆ ಮಾಡುತ್ತೆ. ಅಂತಹ ಏನಾದ್ರೂ ಲಕ್ಷಣ ಕಂಡುಬಂದ್ರೆ ಮತ್ತೊಂದು ರೋಬೋ ಬಳಿ ಹೋಗಿ ತಪಾಸಣೆಗೊಳಗಾಗಬೇಕು. ಯಾರೂ ಕೂಡಾ ನೇರವಾಗಿ ವೈದ್ಯರನ್ನು ಭೇಟಿಯಾಗುವಂತಿಲ್ಲ. ರೋಬೋ ಗ್ರೀನ್ ಸಿಗ್ನಲ್ ಕೊಟ್ರೆ ಮಾತ್ರ ವೈದ್ಯರನ್ನು ಭೇಟಿಯಾಗಬಹುದು. ಅದು ಹೇಗೆ ಕೆಲಸ ಮಾಡುತ್ತೆ? ನೀವೇ ನೋಡಿ..