ಹಾಟ್ ಏರ್ ಬಲೂನ್ ಏರಿ ಧ್ರುವ ಫ್ಯಾಮಿಲಿ ಸರ್ಪ್ರೈಸ್: ಸರ್ಜಾ ಮನೆಗೆ ಬರೋದು ರಾಜಕುಮಾರನಾ? ಲಕ್ಷ್ಮಿನಾ?

ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು ಧ್ರುವ ಸರ್ಜಾ ಕುಟುಂಬದಲ್ಲಿ ಮತ್ತೊಂದು ಸಡಗರ. ಅದಕ್ಕೆ ಕಾರಣ ಧ್ರುವ ಪತ್ನಿ ಪ್ರೇರಣಾ ಮತ್ತೆ ಗರ್ಭಿಣಿ ಆಗಿರೋದು. ಧ್ರುವ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಧ್ರುವನ ಪತ್ನಿ ಪ್ರೇರಣಾ ಈಗ ಎಂಟು ತಿಂಗಳು ತುಂಬು ಗರ್ಭಿಣಿ. 
 

First Published Aug 27, 2023, 11:33 AM IST | Last Updated Aug 27, 2023, 11:33 AM IST

ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು ಧ್ರುವ ಸರ್ಜಾ ಕುಟುಂಬದಲ್ಲಿ ಮತ್ತೊಂದು ಸಡಗರ. ಅದಕ್ಕೆ ಕಾರಣ ಧ್ರುವ ಪತ್ನಿ ಪ್ರೇರಣಾ ಮತ್ತೆ ಗರ್ಭಿಣಿ ಆಗಿರೋದು. ಧ್ರುವ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಧ್ರುವನ ಪತ್ನಿ ಪ್ರೇರಣಾ ಈಗ ಎಂಟು ತಿಂಗಳು ತುಂಬು ಗರ್ಭಿಣಿ. ಹೀಗಾಗಿ ಆಕ್ಷನ್ ಪ್ರಿನ್ಸ್ ಮನೆಯಲ್ಲಿ ಖುಷಿ ಹೆಚ್ಚಾಗಿ. ಹೊಸ ಅತಿಥಿ ಆಗನಕ್ಕೆ ಕಾಯ್ತಾ ಇದ್ದಾರೆ. ಒಂದು ವರ್ಷದ ಹಿಂದೆ ಮಹಾಲಕ್ಷ್ಮಿಯನ್ನ ಮನೆತುಂಬಿಸಿಕೊಂಡಿದ್ದ ಧ್ರುವ ಫ್ಯಾಮಿಲಿ ಈ ಭಾರಿ ರಾಜಕುಮಾರನ ಆಗಮನ ನಿರೀಕ್ಷೆಯಲ್ಲಿದ್ದಾರೆ. 

 2ನೇ ಮಗುವಿನ ನಿರೀಕ್ಷೆಯಲ್ಲಿರೋ ಸರ್ಜಾ ಕುಟುಂಬಕ್ಕೆ ಸೆಪ್ಟೆಂಬರ್ನಲ್ಲಿ ರಾಜಕುಮಾರ ಅಥವ ರಾಜಕುಮಾರಿಯ ಆಗಮನ ಆಗುತ್ತೆ. ಹೀಗಾಗಿ ತನ್ನ ಪತ್ನಿ ಪ್ರೇರಣಾ ಹಾಗು ಮಗಳ ಜೊತೆ ಧ್ರುವ ಸ್ಪೆಷಲ್ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಹಾಟ್ ಏರ್ ಬಲೂನ್ ಏರಿ ಫೋಟೋ ಶೂಟ್ ಮಾಡಿ ನಮ್ಮನೆಯಲ್ಲಿ ಮತ್ತೊಂದು ಸಂಭ್ರಮಾ ಶುರುವಾಗುತ್ತಿದೆ ಅಂತ ಸರ್ಪ್ರೈಸ್ ಸುದ್ದಿ ಹೇಳಿದ್ದಾರೆ. ಈ ವೀಡಿಯೋವನ್ನ ಆ್ಯಕ್ಷನ್ ಪ್ರಿನ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಧ್ರುವ ದಂಪತಿಗೆ ಶುಭಾಷಯಗಳು ಮಹಾಪೂರವೇ ಹರಿದು ಬರ್ತಿದೆ. ಮಾರ್ಟಿನ್ , ಕೆಡಿ ಸಿನಿಮಾದ ಸರ್ಪ್ರೈಸ್ಗೆ ಕಾಯುತ್ತಿರೋ ಅದ್ಧೂರಿ ಹುಡುಗ ಫ್ಯಾನ್ಸ್ಗೆ ಈ ಸುದ್ದಿ ಕೇಳಿ ದಿಲ್ ಖುಷ್ ಆಗಿದೆ. 

Video Top Stories