Asianet Suvarna News Asianet Suvarna News

ಸಿಲಿಕಾನ್ ಸಿಟಿ ರಸ್ತೆಗಳಲ್ಲಿ SORRY SORRY SORRY

ಸಿಲಿಕಾನ್ ಸಿಟಿಯಲ್ಲಿ ಹುಚ್ಚರ ಹಾವಳಿ
ರಸ್ತೆ, ಮನೆ, ಸ್ಕೂಲ್ ಮೆಟ್ಟಿಲುಗಳ ಮೇಲೆ ಸಾರಿ ಬರಹ

ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಮಧ್ಯರಾತ್ರಿ ಯಾರೋ ಹುಚ್ಚಾಟವೆಸಗಿದ್ದು, ಸುಂಕದಕಟ್ಟೆ ಶಾಂತಿಧಾಮ ಕಾಲೇಜು ಗೋಡೆ, ರಸ್ತೆ ಮೇಲೆ ಎಲ್ಲಾ ಕಡೆ ಸಾರಿ ಸಾರಿ ಸಾರಿ ( Sorry )ಎಂದು ಬರೆದಿದ್ದಾರೆ. ರಸ್ತೆ, ಮನೆಯ ಕಾಂಪೌಂಡ್, ಗೋಡೆ, ಸ್ಕೂಲ್ ಮೆಟ್ಟಿಲು, ಸ್ಕೂಲ್ ಕಾಂಪೌಂಡ್ ಹೀಗೆ ಎಲ್ಲಾ ಕಡೆ Sorry ಅಂತಾ ಬರೆಯಲಾಗಿದೆ. ಸ್ಪ್ರೇ ಪೈಂಟ್ ನಲ್ಲಿ ಈ ರೀತಿ ಬರೆಯಲಾಗಿದೆ. ಮನೆಯ ಗೋಡೆಯೊಂದರ ಮೇಲೆ Sorry Ma, Sorry Pa ಅಂತಾ ಸಹ ಬರೆಯಲಾಗಿದೆ. ಮತ್ತೊಂದು ಕಡೆ ಹಾರ್ಟ್ ಸಿಂಬಲ್ ಸಹ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೇ ಈ ರೀತಿ ಹುಚ್ಚಾಟ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
 

Video Top Stories