Asianet Suvarna News Asianet Suvarna News

ವಿಶ್ವ ಆಹಾರದ ದಿನ: ಬನ್ನಿ ಜಂಕ್ ಫುಡ್ ಗೆ ಗುಡ್ ಬೈ ಹೇಳೋಣ

ಪಥ್ಯದಲ್ಲಿ ಇರುವವರಿಗೆ ಆಹಾರದ ಕಡು ಬಯಕೆ ಹಿತ ಶತ್ರುವಿನಂತೆ ಕಾಡುತ್ತದೆ. ಊಟದ ಪದ್ಧತಿಗೆ ಹೊಂದಿ ಕೊಳ್ಳುವುದೂ ಕಷ್ಟ. ಜಂಕ್ ಫುಡ್‌ ಕ್ರೇವಿಂಗ್ ತಡೆಯಲು ವಿಶ್ವ ಆಹಾರದ ದಿನದಂದು ನಿಮಗೆ ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್...

1. ಹೆಚ್ಚೆಚ್ಚು ನೀರು ಕುಡಿಯಿರಿ..
ಬಾಯಾರಿಕೆಯನ್ನು ಆಹಾರದ ತುಡು ಹಾಗೂ ಹಸಿವೆಂದು ಭಾವಿಸಲಾಗುತ್ತದೆ. ಏನಾದ್ರೂ ತಿನ್ನಬೇಕೆಂಬ ಬಯಕೆಯಾದರೆ ಸಾಕಷ್ಟು ನೀರು ಕುಡಿಯಿರಿ. ಕೆಲವು ನಿಮಿಷ ಕಾಯಿರಿ. ಸ್ವಲ್ಪ ಹೊತ್ತಿನಲ್ಲಿಯೇ ಬಯಕೆ ದೂರವಾಗುತ್ತದೆ. ದೇಹಕ್ಕೆ ಕೇವಲ ನೀರಿನ ಬಯಕೆ ಇರುತ್ತದೆ. ತಿನ್ನೋ ಹಂಬಲವಲ್ಲ.

2. ಹಸಿವಿನಿಂದ ಬಳಲಬೇಡಿ...
ಆಹಾರದ ಬಯಕೆ ಕಾಡುವುದು ಹಸಿವಿನ ಕಾರಣ. ಹಸಿವಾದಗಲೇ ಹಾಳು ಮೂಳು ತಿನ್ನಬೇಕು ಎನಿಸುತ್ತದೆ. ಅದಕ್ಕೆ ಹಸಿವೇ ಆಗದಂತೆ ಹುಷಾರಾಗಿರಿ. ಆಗಾಗ ಪೌಷ್ಟಿಕಾಂಶ ಇರೋ ಆಹಾರ ಸೇವಿಸಿ. ಆಗ ಸುಖಾ ಸುಮ್ಮನೆ ಹಸಿವು ನಿಮ್ಮನ್ನು ಕಾಡುವುದಿಲ್ಲ. ಜಂಕ್ ಫುಡ್ ತಿನ್ನೋ ಬಯಕೆ ಆಗುವುದಿಲ್ಲ.

3. ಒತ್ತಡವೇ ಶತ್ರು
ಒತ್ತಡ ಹೆಚ್ಚಾದಷ್ಟು ತಿನ್ನುವ ಬಯಕೆಯೂ ಹೆಚ್ಚುತ್ತದೆ. ಅದರಲ್ಲಿಯೂ ಮಹಿಳೆಯರು ಒತ್ತಡ ಹೆಚ್ಚಾದಾಗ ತಿನ್ನುವುದು ಹೆಚ್ಚು. ಒತ್ತಡ ರಕ್ತದಲ್ಲಿ ಕಾರ್ಟಿಸೋಲ್‌ ಪ್ರಮಾಣ ಹೆಚ್ಚುವಂತೆ ಮಾಡುತ್ತದೆ. ಇದರಿಂದಲೇ ತೂಕ ಹೆಚ್ಚುವುದು. ಅದರಲ್ಲಿಯೂ ಸೊಂಟದ ಬೊಜ್ಜು ಹೆಚ್ಚುವುದು ಒತ್ತಡದಲ್ಲಿ ತಿಂದರೆ!

4. ಚೆನ್ನಾಗಿ ನಿದ್ರಿಸಿ...
ಅಗತ್ಯದಷ್ಟು ನಿದ್ರಿಸುವ ಮಂದಿಗಿಂತ ನಿದ್ರೆಗೆಡುವ ಸುಮಾರು ಶೇ.55 ಮಂದಿ ಬೊಜ್ಜು ಸಮಸ್ಯೆಯಿಂದ ಬಳಲುತ್ತಾರೆ. ಪಚನ ಕ್ರಿಯೆ ಮೇಲೆ ನಿದ್ರಾ ಹೀನತೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಆದರೆ, ಸುಗಮವಾಗಿ ಜೀರ್ಣವಾಗುವುದಿಲ್ಲ.

5. ಸುಖಾ ಸುಮ್ಮನೆ ತಿನ್ನಬೇಡಿ
ಹಸಿವು ಹಾಗೂ ಆಹಾರದ ಬಯಕೆ ನಡುವಿನ ವ್ಯತ್ಯಾಸ ಅರಿತು ಕೊಳ್ಳಿ. ಮನಸಾರೇ ತಿಂದು ಬಿಡಿ. ನಿಧಾನವಾಗಿ ಜಗಿದು ತಿನ್ನಿ. ಟಿವಿ ಅಥವಾ ಸ್ಮಾರ್ಟ್‌ ಫೋನ್ ನೋಡುವಾಗ ತಿನ್ನುವುದನ್ನು ರೂಢಿಸಿಕೊಳ್ಳಬೇಡಿ. ಯಾವುದೇ ಗೊಂದಲವಿಲ್ಲದೇ ಶಾಂತ ಚಿತ್ತರಾಗಿ ತಿಂದರೆ ದೇಹಕ್ಕೂ ಒಳ್ಳೆಯದು. ಬೊಜ್ಜೂ ಬರೋಲ್ಲ. 

 

Video Top Stories