
ಕಷ್ಟದಿಂದ ಕಾಪಾಡಿದ್ದಕ್ಕೆ ಬೆನ್ನಿಗೆ ಚೂರಿ ಹಾಕಿದ ದೇಶ; 16 ಡಿಸಂಬರ್ 1971.. ಭಾರತ ಸೃಷ್ಟಿಸಿತ್ತು ವಿಜಯ ಚರಿತ್ರೆ!
50 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ರಕ್ಷಿಸಿದ ಭಾರತ, ಈಗ ಅದೇ ಬಾಂಗ್ಲಾದೇಶದಿಂದ ನಂಬಿಕೆ ದ್ರೋಹಕ್ಕೆ ಒಳಗಾಗಿದೆ. ಪಾಕಿಸ್ತಾನದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಾಂಗ್ಲಾದೇಶ, ಭಾರತದ ವಿರುದ್ಧ ತಿರುಗಿಬಿದ್ದಿದೆ. ಇದಕ್ಕೆ ಕಾರಣವೇನು ಮತ್ತು ಪರಿಣಾಮಗಳೇನು?
ಡಿಸಂಬರ್ 16.. ಅದು ಕ್ಯಾಲೆಂಡರ್ನಲ್ಲಿರೋ ಒಂದು ಡೇಟ್ ಮಾತ್ರವೇ ಅಲ್ಲ.. ಭಾರತದ ಯೋಧರು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ ದಿನ.. ಆ ಹೋರಾಟವೇನು ತಮ್ಮ ಸ್ವಾರ್ಥಕ್ಕೆ ನಡೆದಿದ್ದಾ? ಖಂಡಿತಾ ಅಲ್ಲ. ಪಕ್ಕದ ದೇಶದಲ್ಲಿ ತಲೆಎತ್ತಿದ್ದ ರಾಕ್ಷಸ ಸಾಮ್ರಾಜ್ಯದ ಸರ್ವನಾಶಕ್ಕೋಸ್ಕರ ನಡೆದ ಹೋರಾಟ. ಪಾಕಿಸ್ತಾನ ಅನ್ನೋ ಪಾಪಿದೇಶದ ಕಪಿಮುಷ್ಠಿಯಿಂದ, ಭಾರತ ಬಾಂಗ್ಲಾದೇಶ ಅನ್ನೋ ಪ್ರದೇಶಕ್ಕೆ ರಾಷ್ಟ್ರದ ಸ್ಥಾನ ಮಾನ ಕೊಡಿಸಿತ್ತು.. ಆದ್ರೆ, ಅದಾಗಿ 5 ದಶಕಗಳು ಕಳೆಯೋದ್ರಲ್ಲಿ, ಭಾರತದ ವಿರುದ್ಧವೇ ನಿಂತುಬಿಟ್ಟಿದೆ, ಆ ಪಾಪಿ ದೇಶ.. ಅದಕ್ಕೆ ಕಾರಣ ಏನು? ಅದರ ಪರಿಣಾಮ ಏನು? ಅಸಲಿಗೆ 50 ವರ್ಷಗಳ ಹಿಂದೆ, ಆಗಿದ್ದೇನೇನು? ರಕ್ಷಿಸಿದ ದೇಶದ ಬೆನ್ನಿಗೇ ಚೂರಿ ಹಾಕ್ತಾ ಇರೋ, ಬಾಂಗ್ಲಾದೇಶದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.