Asianet Suvarna News Asianet Suvarna News

ಕುರ್ಚಿಗಾಗಿ ಮಕ್ಕಳೆದುರೇ ಟೀಚರ್ಸ್ ಕಿತ್ತಾಟ!

 

  • ಕುರ್ಚಿಗಾಗಿ ಮಕ್ಕಳೆದುರೇ ಶಿಕ್ಷಕಿಯರ ಕಿತ್ತಾಟ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
  • ಶಿಕ್ಷಕಿಯರ ವರ್ತನೆಗೆ ವ್ಯಾಪಕ ಖಂಡನೆ

ಶಿಕ್ಷಕರು ಮಕ್ಕಳಿಗೆ ದಾರಿ ತೋರುವ ಗುರುಗಳು. ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಶಿಕ್ಷಕರು ಮಕ್ಕಳ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರ ಇಲ್ಲೊಂದು ಕಡೆ ಶಿಕ್ಷಕರೇ ಖರ್ಚಿಗಾಗಿ ಕಿತ್ತಾಡಿದ್ದಾರೆ. ಮಧ್ಯಪ್ರದೇಶ ಸಾತ್ನಾ ಜಿಲ್ಲೆಯ ಚಿತ್ರಕೂಟದ ಶಾಲೆಯೊಂದರಲ್ಲಿ ಈ ಅವಮಾನಕಾರಿ ಘಟನೆ ನಡೆದಿದೆ. ಒಂದು ಕುರ್ಚಿಗಾಗಿ ಇಬ್ಬರು ಮಹಿಳಾ ಶಿಕ್ಷಕರು ಕಿತ್ತಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳಿಗೆ ಬುದ್ದಿ ಹೇಳಬೇಕಾದ ಶಿಕ್ಷಕರೇ ಹೀಗೆ ಮಕ್ಕಳಿಗಿಂತ ಕಡೆಯಾಗಿ ಒಂದು ಕುರ್ಚಿಗಾಗಿ ಕಿತ್ತಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Video Top Stories